ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಕ್ಷಯ್, ವಾರ್ಷಿಕ ಆದಾಯ ಎಷ್ಟು ಗೊತ್ತಾ?

ಫೋರ್ಬ್ಸ್‌ನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ.

Published: 11th July 2019 12:00 PM  |   Last Updated: 11th July 2019 11:23 AM   |  A+A-


Akshay Kumar only Indian in World’s highest-paid celebrities list by Forbes

ಅಕ್ಷಯ್ ಕುಮಾರ್

Posted By : LSB LSB
Source : IANS
ಲಾಸ್ ಏಂಜಲೀಸ್: ಫೋರ್ಬ್ಸ್‌ನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ 100 ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್ ಪಾತ್ರರಾಗಿದ್ದಾರೆ. 

ಅಕ್ಷಯ್ ಕುಮಾರ್ ಅವರು ವಾರ್ಷಿಕ 444 ಕೋಟಿ ರೂ. ಆದಾಯ ಗಳಿಕೆಯೊಂದಿಗೆ 33ನೇ ರ್ಯಾಂಕ್ ಪಡೆದಿದ್ದಾರೆ. ಈ ಮೂಲಕ ಜನಪ್ರಿಯ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳಾದ ರಿಹಾನ್ನಾ, ಜಾಕಿ ಚಾನ್, ಸ್ಕಾರ್ಲೆಟ್ ಜೋಹಾನ್ಸನ್, ಕ್ರಿಸ್ ಇವಾನ್ಸ್ ಮತ್ತು ಕೇಟಿ ಪೆರಿಯನ್ನೂ ಹಿಂದಿಕ್ಕಿದ್ದಾರೆ.

ಫೋರ್ಬ್ಸ್ ಪ್ರಕಾರ, "ಕೇಸರಿ" ನಟ ಅಕ್ಷಯ್ ಕುಮಾರ್ ಪ್ರತಿ ಸಿನಿಮಾಕ್ಕೆ ಕನಿಷ್ಠ 5 ಮಿಲಿಯನ್ ಡಾಲರ್ ನಿಂದ 10 ಮಿಲಿಯನ್ ಡಾಲರ್'ವರೆಗೆ, ಅಂದರೆ  35 ರಿಂದ 70 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಇದರ ಜೊತೆಗೆ ಟಾಟಾ ಮತ್ತು ಹಾರ್ಪಿಕ್ ಸೇರಿದಂತೆ ಸುಮಾರು 20ಕ್ಕೂ ಅಧಿಕ ಬ್ರಾಂಡ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಲಕ್ಷಾಂತರ ಸಂಭಾವನೆ ಪಡೆದಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ.

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಅವರು ಪ್ರಸ್ತುತ ಜಗನ್ ಶಕ್ತಿಯ 'ಮಿಷನ್ ಮಂಗಲ್', ಫರ್ಹಾದ್ ಸಂಜಿಯ 'ಹೌಸ್ ಫುಲ್ 4', ರಾಜ್ ಮೆಹ್ತಾ ಅವರ 'ಗುಡ್ ನ್ಯೂಸ್', ರಾಘವ ಲಾರೆನ್ಸ್ ಅವರ 'ಲಕ್ಷ್ಮಿ ಬಾಂಬ್' ಮತ್ತು ರೋಹಿತ್ ಶೆಟ್ಟಿಯ 'ಸೂರ್ಯವಂಶಿ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp