ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆ ಗೆಲುವು: 2,000 ರು. ಉದಾಹರಣೆಯೊಂದಿಗೆ ಐಸಿಸಿಯನ್ನು ಕುಟುಕಿದ ಬಿಗ್ ಬಿ

ಐಸಿಸಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆದ್ದ ರೀತಿ ಹಾಗೂ ಐಸಿಸ್ಯ ಬೌಂಡರಿ ನಿಯಮಗಳ ಕುರಿತಂತೆ ಇದಾಗಲೇ ಕ್ರಿಕೆಟ್ ಲೋಕದ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದಿದೆ.
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
ಮುಂಬೈ: ಐಸಿಸಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆದ್ದ ರೀತಿ ಹಾಗೂ ಐಸಿಸ್ಯ ಬೌಂಡರಿ ನಿಯಮಗಳ ಕುರಿತಂತೆ ಇದಾಗಲೇ ಕ್ರಿಕೆಟ್ ಲೋಕದ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದಿದೆ. ಇದೀಗ ಭಾಲಿವುಡ್ ಬಿಗ್ ಅಮಿತಾಬ್ ಬಚ್ಚನ್ ಸಹ ಕ್ಕಿಡಿ ಕಾರಿದ್ದಾರೆ.
ಐಸಿಸಿ ಬೌಂಡರಿ ನಿಯಮಾವಳಿಯ ಕುರಿತಂತೆ ಟ್ವೀಟ್ ಮಾಡಿರುವ ನಟ ಅಮಿತಾಬ್ 2,000 ರು. ನೋಟಿನ ಉದಾಹರಣೆಯೊಡನೆ ಅದನ್ನು ಟ್ರೋಲ್ ಮಾಡಿದ್ದಾರೆ.
ನಿಮ್ಮ ಬಳಿ 2,000 ರು ಇದೆ, ಹಾಗೆಯೇ ನನ್ನ ಬಳಿಯೂ 2,000 ರು. ಇದೆ. ಆದರೆ ನಿಮ್ಮ ಬಳಿ 2,000 ರು. ಒಂದು ನೋಟಿದ್ದರೆ ನನ್ನ ಬಳಿ 500 ರು. ನಾಲ್ಕು ನೋಟು ಇದೆ ಎಂದುಕೊಳ್ಳಿ. ಆದರೆ ಈಗ ಯಾರು ಶ್ರೀಮಂತರಾಗುತ್ತಾರೆ? ಐಸಿಸಿ ಪ್ರಕಾರ 500 ರು. ನಾಲ್ಕು ನೋಟಿರುವ ನಾನು ಶ್ರೀಮಂತನಾಗುತ್ತೇನೆ - ಅಮಿತಾಬ್ ಟ್ವೀಟ್ ಮಾಡಿದ್ದಾರೆ.
ನಟ, ರಾಜಕಾರಣಿ ಪರೇಶ್ ರಾವಲ್ ಸಹ ಈ ಬಗ್ಗೆ ಮಾತನಾಡಿದ್ದು ಎಂ.ಎಸ್. ಧೋನಿಗೆ ಗ್ಲೌಸ್ ಬದಲಿಸುವಂತೆ ಸೂಚಿಸಿದ್ದ ಐಸಿಸ್ ಮೊದಲಿಗೆ ತನ್ನ ಸೂಪ ಓವರ್ ನಿಯಮಾವಳಿಯನ್ನು ಬದಲಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com