ಭೀಕರ ರಸ್ತೆ ಅಪಘಾತ: ಪ್ರತಿಭಾವಂತ ಬಾಲನಟನ ದುರ್ಮರಣ

ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂದಿಯ ಪ್ರಖ್ಯಾತ ಧಾರಾವಾಹಿ ಸಂಕಟ ಮೋಚನ್ ಹನುಮಾನ್ ಖ್ಯಾತಿಯ ಬಾಲನಟ ಶಿವ್‌ಲೇಕ್ ಸಿಂಗ್(14) ಸ್ಥಳದಲ್ಲೇ ...

Published: 19th July 2019 12:00 PM  |   Last Updated: 19th July 2019 05:01 AM   |  A+A-


Shivlekh Singh

ಶಿವ್ಲೇಕ್ ಸಿಂಗ್

Posted By : SD SD
Source : PTI
ರಾಯ್ ಪುರ: ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ  ಹಿಂದಿಯ ಪ್ರಖ್ಯಾತ ಧಾರಾವಾಹಿ ಸಂಕಟ ಮೋಚನ್ ಹನುಮಾನ್ ಖ್ಯಾತಿಯ ಬಾಲನಟ ಶಿವ್‌ಲೇಕ್ ಸಿಂಗ್(14) ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಛತ್ತೀಸ್‌ಘಡದ ರಾಯ್ಪುರ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಶಿವ್ಲೇಕ್ ಸಿಂಗ್ ಸಾವನ್ನಪ್ಪಿದ್ದು, ಈತನ ಅಪ್ಪ- ಅಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರದಂದು ಮಧ್ಯಾಹ್ನ 3ಗಂಟೆ ಸಮಯದಲ್ಲಿ ಬಾಲನಟ ಶಿವ್‌ಲೇಕ್ ಸಿಂಗ್ ಅಪ್ಪ- ಅಮ್ಮನ ಜೊತೆ ರಾಯ್ಪುರ್‌ಗೆ ಟಿ ಸಂದರ್ಶನಕ್ಕಾಗಿ  ತೆರಳುತ್ತಿರುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಮೂಲತಃ ಛತ್ತೀಸ್‌ಘಡದ ಜಂಜ್‌ಗೀರ್- ಚಂಪಾ ಜಿಲ್ಲೆಯವನಾದರೂ, ತಂದೆ-ತಾಯಿಯೊಟ್ಟಿಗೆ ಮುಂಬೈನಲ್ಲಿ ವಾಸಿಸುತ್ತಿದ್ದ. ಹಿಂದಿಯ ಪ್ರಖ್ಯಾತ ಧಾರಾವಾಹಿಗಳಾದ ಸಂಕಟ್ ಮೋಚನ್ ಹನುಮಾನ, ಸಸುರಾಲ್ ಸಿಮರ್‌ಕಾ ಧಾರಾವಾಹಿಯಲ್ಲಿ ಈ ಬಾಲನಟ ಬಣ್ಣ ಹಚ್ಚಿದ್ದಾನೆ. ಶಿವ್ಲೇಕ್ ತಾಯಿ ಲೇಖ್ನಾ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
Stay up to date on all the latest ಬಾಲಿವುಡ್ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp