ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಗೆ ಜೀವ ಬೆದರಿಕೆ

ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಗಾಯಕ ಮುಂಬೈ ಕ್ರೈಂ ಬ್ರ್ಯಾಂಚ್ (ದರೋಡೆ ವಿರೋಧಿ ವಿಭಾಗ-ಎಇಸಿ) ಗೆ ದೂರು ಸಲ್ಲಿಸಿದ್ದಾರೆ.
ಉದಿತ್ ನಾರಾಯಣ್
ಉದಿತ್ ನಾರಾಯಣ್
ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಗಾಯಕ ಮುಂಬೈ ಕ್ರೈಂ ಬ್ರ್ಯಾಂಚ್ (ದರೋಡೆ ವಿರೋಧಿ ವಿಭಾಗ-ಎಇಸಿ) ಗೆ ದೂರು ಸಲ್ಲಿಸಿದ್ದಾರೆ.
ಘಟನೆ ಸಂಬಂಧ ಇದುವರೀಗೆ ಯಾವುದೇ ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್) ನೋಂದಣಿಯಾಗಿಲ್ಲವಾದರೂ, ಬಿಹಾರದಿಂದ ಗಾಯಕನಿಗೆ ಕರೆ ಮಾಡಿರುವ ಮೊಬೈಲ್ ಫೋನ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಅಲ್ಲದೆ ಗಾಯಕ ಉದಿತ್ ನಾರಾಯಣ್ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವುದು ಕಳವು ಮಾಡಿರುವ ಮೊಬೈಲ್ ಫೋನ್ ನಿಂದ ಎಂಬುದು ಸಹ ಗೊತ್ತಾಗಿದೆ.
“ನಾವು ಉದಿತ್ ನಾರಾಯಣ್ ಅವರ ಹೇಳಿಕೆಯನ್ನು ದಾಖಲಿಸಿದ್ದೇವೆ. ಬೆದರಿಕೆ ಇರುವುದರಿಂದ, ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ) ಪ್ರಕಾರ ಈ ಹೇಳಿಕೆಯನ್ನು ಅಪರಾಧ ವಿಭಾಗದ ಎಇಸಿಗೆ ವಿಚಾರಣೆಗೆ ಕಳುಹಿಸಲಾಗಿದೆ ”ಎಂದು ಅಂಬೋಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಭರತ್ ಗಾಯಕ್ವಾಡ್ ಹೇಳಿದ್ದಾರೆ.
“ನಾರಾಯಣ್ ಅವರ ಹೇಳಿಕೆಯ ಪ್ರಕಾರ, ಕರೆ ಮಾಡಿದವರು ಅವನನ್ನು ನಿಂದಿಸುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ. ನಾವು ನಾರಾಯಣ್ ಅವರ ನಿವಾಸದ ಬಳಿ ಗಸ್ತು ಹೆಚ್ಚಿಸಿದ್ದೇವೆ. ಅನುಮಾನಾಸ್ಪದ ಜನರ ಮೇಲೆ ನಿರಂತರ ನಿಗಾ ಇಡಲು ಪೊಲೀಸ್ ಸಿಬ್ಬಂದಿಯನ್ನು ಸುತ್ತಮುತ್ತಲ ಪ್ರದೇಶಗಳಲ್ಲಿ ಸಾದಾ ಉಡುಪಿನಲ್ಲಿ  ನಿಯೋಜಿಸಲಾಗಿದೆ, ”ಎಂದು ಅವರು ಹೇಳಿದರು. ಒಂದೇ ಸಂಖ್ಯೆಯಿಂದ ಗಾಯಕ ಉದಿತ್ ಗೆ ಕಳೆದೊಂದು ತಿಂಗಳಲ್ಲಿ ಮೂರು ಬಾರಿ ಕರೆ ಬಂದಿದೆ.ಕರೆ ಮಾಡಿದವನು ಅವರನ್ನು ಕೆಟ್ಟ ಮಾತುಗಳಿಂದ ನಿಂದಿಸಿದ್ದಾನೆ. ಮತ್ತು ಜೀವ ಬೆದರಿಕೆ ಹಾಕುವ ಮೂಲಕ ಭೀಕರ ಪರಿಣಾಮ ಎದುರಿಸಬೇಕೆಂದು ಹೇಳುತ್ತಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಯಕನ ಮನೆ, ಅವರು ಆಗಾಗ ತೆರಳುವ ಸ್ಥಳಗಳ ಮಾಹಿತಿ ತನಿಗಿದೆ ಎಂದು ಕರೆ ಮಾಡಿದ ಅಪರಿಚಿತ ಹೇಳಿದ್ದಾನೆ.ಅಲ್ಲದೆ ತಾನು ಲಕ್ಷ್ಮಣ್ ಎಂದು ಹೇಳಿಕೊಂಡಿರುವ ವ್ಯಕ್ತಿ ಉದಿತ್ ನಾರಾಯಣ್ ಅವರನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಮೊದಲು ಒಂದು ತಿಂಗಳ ಹಿಂದೆ ಕರೆ ಮಾಡಿದ್ದ ಆ ವ್ಯಕ್ತಿ ಎರಡನೇ ಕರೆ ಜುಲೈ 17 ರಂದು ಮತ್ತು ಮೂರನೇ ಕರೆ ಜುಲೈ 23 ರಂದು ಬಂದಿದೆ. ವಿಚಾರಣೆ ವೇಳೆ ಉದಿತ್ ನಾರಾಯಣ ವಾಸಿಸುವ ಕಟ್ಟಡದ ಭದ್ರತಾ ಸಿಬ್ಬಂದಿ ಸರಿನಲ್ಲಿ ಕರೆ ಮಾಡಿದ ಫೋನ್ ಸಂಖ್ಯೆಯನ್ನು ನೋಂದಾಯಿಸಲಾಗಿದೆ ಎಂಬುದು ಪತ್ತೆಯಾಗಿದೆ.ಈ ಸಂಬಂಧ ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಆತ ಮೂರು ತಿಂಗಳ ಹಿಂದೆ ಬಿಹಾರಕ್ಕೆ ತೆರಳುವಾಗ ಆತನ ಮೊಬೈಲ್ ಕಳುವಾಗಿದೆ ಎಂದು ಉತ್ತರಿಸಿದ್ದನೆ. ಆದರೆ ಭದ್ರತಾ ಸಿಬ್ಬಂದಿ ತನ್ನ ಫೋನ್ ಕಳವಾಗಿರುವ ಬಗ್ಗೆ ಪೋಲೀಸರಿಗೆ ದೂರು ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com