'ಖಿಲಾಡಿ' ಖ್ಯಾತಿಯ ಬಾಲಿವುಡ್ ನಟ ದಿನ್ಯಾರ್ ಕಂಟ್ರಾಕ್ಟರ್ ನಿಧನ

ಬಾಲಿವುಡ್ ಹಿರಿಯ ನಟ "ಬಾದ್ ಶಾ", "ಖಿಲಾಡಿ" ಖ್ಯಾತಿಯ ದಿನ್ಯಾರ್ ಕಾಂಟ್ರಾಕ್ಟರ್ (79) ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು.

Published: 05th June 2019 12:00 PM  |   Last Updated: 05th June 2019 12:48 PM   |  A+A-


Dinyar Contractor

ದಿನ್ಯಾರ್ ಕಾಂಟ್ರಾಕ್ಟರ್

Posted By : RHN RHN
Source : PTI
ಮುಂಬೈ: ಬಾಲಿವುಡ್ ಹಿರಿಯ ನಟ "ಬಾದ್ ಶಾ", "ಖಿಲಾಡಿ" ಖ್ಯಾತಿಯ ದಿನ್ಯಾರ್ ಕಾಂಟ್ರಾಕ್ಟರ್ (79) ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಮರಣಿಸಿದರೆಂದು ಕುಟುಂಬ ಮೂಲಗಳು ಹೇಳಿದೆ. ಇಂದು ಮಧ್ಯಾಹ್ನ  3.30ಕ್ಕೆ ಪಾರ್ಸಿಗಳ ರುದ್ರಭೂಮಿ ವರ್ಲಿಯ ಪ್ರಾರ್ಥನಾ ಸಭಾಂಗಣದಲ್ಲಿ ಕಂಟ್ರಾಕ್ಟರ್ ಅಂತ್ಯ ಸಂಸ್ಕಾರ ನೆರವೇರಲಿದೆ.

ರಂಗಭೂಮಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ತಮ್ಮ ಹಾಸ್ಯಮಿಶ್ರಿತ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಈ ವರ್ಷಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
>
ಪ್ರಧಾನಿ ನರೇಂದ್ರ ಮೋದಿ, ಸಚಿವೆ ಸ್ಮೃತಿ ಇರಾನಿ ಸೇರಿ ಹಲವು ಗಣ್ಯರು ಹಿರಿಯ ನಟನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
Stay up to date on all the latest ಬಾಲಿವುಡ್ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp