ನೀವು ನಮ್ಮ ಸಂಸ್ಕೃತಿಗೆ ಕಳಂಕ: ಬ್ಲೌಸ್ ಹಾಕದೆ ಸೀರೆಯುಟ್ಟ ಪ್ರಿಯಾಂಕಾ ಡ್ಯಾನ್ಸ್, ವಿಡಿಯೋ ವೈರಲ್!

ಬಾಲಿವುಡ್ ನ ಹಾಟ್ ಬೆಡಗಿ ಪ್ರಿಯಾಂಕಾ ಚೋಪ್ರಾ ತನಗಿಂತ ಚಿಕ್ಕವಯಸ್ಸಿನ ಯುವಕ ನಿಕ್ ಜೋಸನ್ ನನ್ನು ವಿವಾಹವಾದ ಬಳಿಕ ಅಶ್ಲೀಲ ಉಡುಪುಗಳನ್ನು ತೊಟ್ಟು ಸಖತ್ ವೈರಲ್ ಆಗುತ್ತಿದ್ದಾರೆ.

Published: 07th June 2019 12:00 PM  |   Last Updated: 07th June 2019 07:44 AM   |  A+A-


Priyanka Chopra

ಪ್ರಿಯಾಂಕಾ ಚೋಪ್ರಾ

Posted By : VS VS
Source : Online Desk
ಬಾಲಿವುಡ್ ನ ಹಾಟ್ ಬೆಡಗಿ ಪ್ರಿಯಾಂಕಾ ಚೋಪ್ರಾ ತನಗಿಂತ ಚಿಕ್ಕವಯಸ್ಸಿನ ಯುವಕ ನಿಕ್ ಜೋಸನ್ ನನ್ನು ವಿವಾಹವಾದ ಬಳಿಕ ಅಶ್ಲೀಲ ಉಡುಪುಗಳನ್ನು ತೊಟ್ಟು ಸಖತ್ ವೈರಲ್ ಆಗುತ್ತಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಕವಾಗಿರುವ ಸೀರೆಯನ್ನು ಹುಟ್ಟಿದ್ದಾರೆ. ಆದರೆ ಬ್ಲೌಸ್ ಧರಿಸಿದೆ ಇದೀಗ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. 

ಸದ್ಯ ಪ್ರಿಯಾಂಕಾ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಆದರೆ ಬ್ಲೌಸ್ ಅನ್ನು ಹಾಕದೆ ಫೋಟೋಶೂಟ್ ಮಾಡಿಸಿರುವುದು ಅವರ ಅಭಿಮಾನಿಗಳು ಕೆರಳುವಂತೆ ಮಾಡಿದೆ. ಸದ್ಯ ಪ್ರಿಯಾಂಕಾರ ಹಾಟ್ ಫೋಟೋಗಳು ಹಾಗೂ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಮ್ಯಾಗಜಿನ್ ವೊಂದಕ್ಕೆ ಪ್ರಿಯಾಂಕಾ ಚೋಪ್ರಾ ಫೋಟೋಶೂಟ್ ಮಾಡಿಸಿದ್ದಾರೆ. ಗೋಲ್ಡನ್ ಬಣ್ಣದ ಸೀರೆಯುಟ್ಟು ತಮ್ಮ ಬೆನ್ನನ್ನು ಎಕ್ಸ್ ಪೋಸ್ ಮಾಡಿದ್ದಾರೆ. ಈ ಫೋಟೋ ನೋಡಿ ನೆಟಿಗರು ಪ್ರಿಯಾಂಕಾರನ್ನು ಟ್ರೋಲ್ ಮಾಡುತ್ತಿದ್ದಾರೆ. 

ಈ ರೀತಿ ನೀವು ವರ್ತಿಸುವುದು ಸರಿಯಲ್ಲ. ನಮ್ಮ ದೇಶದ ಸಂಸ್ಕೃತಿಯನ್ನು ಮರೆಯುತ್ತಿದ್ದೀರಾ? ನೀವು ಸುಂದರವಾಗಿ ಕಾಣುತ್ತಿದ್ದೀರಾ. ಆದರೆ ಸೀರೆ ದೇಹ ಮುಚ್ಚಿಕೊಳ್ಳುವುದಕ್ಕೆ ಇರುವುದು ಎಂದು ಕಮೆಂಟ್ ಮಾಡಿದ್ದಾರೆ. 
facebook twitter whatsapp