ಚಿತ್ರವೊಂದಕ್ಕೆ ಬರೋಬ್ಬರಿ 48 ಕೋಟಿ ರೂ. ಸಂಭಾವನೆ ಪಡೆಯಲಿರುವ ಹೃತಿಕ್ ರೋಶನ್?

ಇತ್ತೀಚೆಗೆ ಚಿತ್ರಗಳು ಉತ್ತಮ ಪ್ರದರ್ಶನ ಕಾಣುವುದರ ಜೊತೆಗೆ ನಟರು ತೆಗೆದುಕೊಳ್ಳುತ್ತಿರುವ ಸಂಭಾವನೆಯನ್ನು ಅಳೆಯಲಾಗುತ್ತಿದೆ. ಹೀಗಾಗಿ ಚಿತ್ರದಿಂದ ಚಿತ್ರಕ್ಕೆ ಕಲಾವಿದರ ಸಂಭಾವನೆ...

Published: 08th June 2019 12:00 PM  |   Last Updated: 08th June 2019 01:14 AM   |  A+A-


Hrithik Roshan

ಹೃತಿಕ್ ರೋಶನ್

Posted By : VS VS
Source : Online Desk
ಮುಂಬೈ: ಇತ್ತೀಚೆಗೆ ಚಿತ್ರಗಳು ಉತ್ತಮ ಪ್ರದರ್ಶನ ಕಾಣುವುದರ ಜೊತೆಗೆ ನಟರು ತೆಗೆದುಕೊಳ್ಳುತ್ತಿರುವ ಸಂಭಾವನೆಯನ್ನು ಅಳೆಯಲಾಗುತ್ತಿದೆ. ಹೀಗಾಗಿ ಚಿತ್ರದಿಂದ ಚಿತ್ರಕ್ಕೆ ಕಲಾವಿದರ ಸಂಭಾವನೆ ಬದಲಾಗುತ್ತಲೇ ಇರುತ್ತದೆ. 

ಈಗ ಬಾಲಿವುಡ್ ನಟ ಹೃತಿಕ್ ರೋಶನ್ ತಮ್ಮ ಮುಂಬರುವ ಚಿತ್ರಕ್ಕಾಗಿ ಬರೋಬ್ಬರಿ 48 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರಂತೆ. ಸಿದ್ಧಾರ್ಥ ಆನಂದ್ ನಿರ್ದೇಶನದಲ್ಲಿ ಮೂಡಿಬರಲಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಹೃತಿಕ್ 48 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ.

ಈ ಚಿತ್ರದಲ್ಲಿ ಹೃತಿಕ್ ಹೊರತಾಗಿ ನಟ ಟೈಗರ್ ಶ್ರಾಫ್ ಕೂಡ ನಟಿಸುತ್ತಿದ್ದಾರೆ. ಮುಂದಿನ ಬೇಸಿಗೆ ರಜೆಯಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ. ಚಿತ್ರಕ್ಕಾಗಿ ಟೈಗರ್ ಕೂಡ ಉತ್ತಮ ಸಂಭಾವನೆ ಪಡೆದುಕೊಳ್ಳುತ್ತಿದ್ದಾರಂತೆ. ಯಶ್ ರಾಜ್ ಚಿತ್ರ ನಿರ್ಮಾಣ ಸಂಸ್ಥೆಯಡಿ ಮೂಡಿಬರಲಿರುವ ಈ  ಚಿತ್ರದಲ್ಲಿ ಅತ್ಯಾಕರ್ಷಕ ಆ್ಯಕ್ಷನ್ ಭರಿತ ದೃಶ್ಯಗಳನ್ನು ತೆರೆಗೆ ತರುವ ಯೋಜನೆಯಲ್ಲಿದೆಯಂತೆ ಚಿತ್ರತಂಡ. 

ಅಲ್ಲದೇ, ಹೃತಿಕ್ ನಟನೆ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಿ ಚಿತ್ರಮಂದಿರಕ್ಕೆ ಬರಮಾಡಿಕೊಳ್ಳುವದರಿಂದ ಅವರನ್ನು ನಂಬಿ ದುಬಾರಿ ಹಣ ವೆಚ್ಚಮಾಡಲು ನಿರ್ಮಾಪಕರು ತಯಾರಿಯಾಗಿದ್ದಾರಂತೆ. ಹೃತಿಕ್ ಅಭಿನಯದ 'ಸೂಪರ್-30' ಚಿತ್ರ ಜುಲೈ 12ಕ್ಕೆ ಬಿಡುಗಡೆಗೊಳ್ಳಲಿದೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp