ಅಮಿತಾಬ್ ಬಚ್ಚನ್ ಟ್ವಿಟರ್ ಖಾತೆ ಹ್ಯಾಕ್, ಪ್ರೊಫೈಲ್ ಪಿಕ್ ಗೆ ಇಮ್ರಾನ್ ಖಾನ್ ಫೋಟೋ!

ಬಾಲಿವುಡ್ ಹಿರಿಯ ನಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ರ ಟ್ವಿಟರ್ ಖಾತೆಯನ್ನು ಪಾಕಿಸ್ತಾನ ಬೆಂಬಲಿತ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಪ್ರೊಫೈಲ್ ಪಿಕ್ಚರ್ ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಅಪ್ಲೋಡ್ ಮಾಡಲಾಗಿದೆ.

Published: 11th June 2019 12:00 PM  |   Last Updated: 12th June 2019 12:24 PM   |  A+A-


BigB Amithab Bachchan's Twitter account hacked, profile picture changed to Pak PM imran Khan's

ಬಿಗ್ ಬಿ ಅಮಿತಾಬ್ ಬಚ್ಚನ್ ಟ್ವಿಟರ್ ಖಾತೆ ಹ್ಯಾಕ್

Posted By : SVN SVN
Source : Online Desk
ಮುಂಬೈ: ಬಾಲಿವುಡ್ ಹಿರಿಯ ನಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ರ ಟ್ವಿಟರ್ ಖಾತೆಯನ್ನು ಪಾಕಿಸ್ತಾನ ಬೆಂಬಲಿತ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಪ್ರೊಫೈಲ್ ಪಿಕ್ಚರ್ ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಅಪ್ಲೋಡ್ ಮಾಡಲಾಗಿದೆ. 

ಅಂತೆಯೇ ಹಾಗೆಯೇ ಅಮಿತಾಭ್ ಬಯೋಡೇಟಾವನ್ನೂ ಬದಲಾಯಿಸಿದ್ದು, ಕವರ್ ಪಿಕ್ ಗೆ ಟರ್ಕಿಷ್ ಹ್ಯಾಕರ್ ಗ್ರೂಪ್ ಅಯ್ಯಿಲ್ದಿಜ್ ತಂಡ ಲೋಗೋ ಹಾಕಲಾಗಿದೆ. ಬಿಗ್ ಬಿ ಟ್ವಿಟರ್ ಖಾತೆಯನ್ನು ಯಾರು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲವಾದರೂ, ಇದರ ಹಿಂದೆ ಪಾಕಿಸ್ತಾನ ಬೆಂಬಲಿತ ಹ್ಯಾಕರ್ ಗಳ ಕೈವಾಡದ ಕುರಿತು ಶಂಕೆ ವ್ಯಕ್ತವಾಗಿದೆ. ಬಿಗ್ ಬಿ ಬಯೋಡೇಟಾ ಮೇಲೆ ಲವ್ ಪಾಕಿಸ್ತಾನ್ ಎಂದು ಬರೆಯಲಾಗಿದೆ. 

ಅಮಿತಾಭ್ ಖಾತೆಯನ್ನು ಹ್ಯಾಕ್ ಮಾಡಿರುವುದು ಟರ್ಕಿಷ್ ಹ್ಯಾಕರ್ ಗ್ರೂಪ್ ಅಯ್ಯಿಲ್ದಿಜ್ ತಂಡ ಎನ್ನಲಾಗಿದೆ. ಪಿನ್ ಮಾಡಲಾದ ಟ್ವೀಟ್‍ನಲ್ಲಿ ಅವರು ಐಸ್ ಲ್ಯಾಂಡ್ ಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಬರೆದಿದ್ದಾರೆ.  ಪ್ರಸ್ತುತ ಖಾತೆಯನ್ನು ಸರಿಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಅಮಿತಾಭ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಸದಾ ಕ್ರೀಯಾಶೀಲವಾಗಿರುತ್ತಾರೆ. ಅಭಿಮಾನಿಗಳು ಬಿಗ್ ಬಿಯನ್ನು ಫಾಲೋ ಆಗುತ್ತಿರುತ್ತಾರೆ. ಈ ರೀತಿ ಇರಬೇಕಾದರೆ ಸೋಮವಾರವಷ್ಟೇ ಅವರು ತಮ್ಮ ನಿಧನರಾದ ಸೆಕ್ರೆಟರಿ ಶೀತಲ್ ಜೈನ್ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp