ದಿವಂಗತ ನಟ ಅಮರೀಶ್ ಪುರಿ 87ನೇ ಹುಟ್ಟಹಬ್ಬಕ್ಕೆ ಗೂಗಲ್-ಡೂಡಲ್ ಗೌರವ!

ಖ್ಯಾತ ಬಾಲಿವುಡ್ ನಟ ದಿವಂಗತ ಅಮರೀಶ್ ಪುರಿ ಅವರ 87ನೇ ಜನ್ಮ ದಿನಾಚರಣೆಯನ್ನು ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಕೆ ಮಾಡಿದೆ.

Published: 22nd June 2019 12:00 PM  |   Last Updated: 22nd June 2019 02:49 AM   |  A+A-


Google-Doodle Celebrates Amrish Puri's 87th Birth Anniversary

ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ಖ್ಯಾತ ಬಾಲಿವುಡ್ ನಟ ದಿವಂಗತ ಅಮರೀಶ್ ಪುರಿ ಅವರ 87ನೇ ಜನ್ಮ ದಿನಾಚರಣೆಯನ್ನು ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಕೆ ಮಾಡಿದೆ.

ಇಂದು ಜೂನ್ 22 2019ರಂದು ಅಮರೀಶ್ ಪುರಿ ಅವರ 87ನೇ ಜನ್ಮ ದಿನಾಚರಣೆಯಾಗಿದ್ದು, ಖ್ಯಾತ ಅಂತರ್ಜಾಲ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ದಿವಂಗತ ನಟನನ್ನು ಸ್ಮರಿಸಿಕೊಂಡಿದೆ. 

ಅಮರೀಶ್ ಪುರಿ ವಿಲ್ಲನ್ ಪಾತ್ರಗಳಿಂದಲೇ ಭಾರತೀಯ ಸಿನಿರಂಗದಲ್ಲಿ ಖ್ಯಾತಿಯ ಉತ್ತುಂಗಕ್ಕೆ ಏರಿದವರು. ಮಿಸ್ಚರ್ ಇಂಡಿಯಾ  ಚಿತ್ರದ ಮೊಗ್ಯಾಂಬೋ ಪಾತ್ರ ಅವರನ್ನು ಖಡಕ್ ಖಳನಟನಾಗಿಸಿತ್ತು. ಕೇವಲ ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟಿಸಿದ್ದ ಅಂಬರೀಶ್ ಪುರಿ ಅವರು, ಕನ್ನಡ, ತೆಲುಗು, ಮಲಯಾಳಂ, ತಮಿಳು, ಇಂಗ್ಲೀಷ್, ಪಂಜಾಬಿ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ನಟಿಸಿದ್ದಾರೆ. 

ಕನ್ನಡದ ಗಂಡಭೇರುಂಡ, ಕಾಡು, ತೆಲುಗಿನ ಆಕರಿ ಪೋರಾಟಂ, ಜಗದೇಕ ವೀರುಡು ಅತಿಲೋಕ ಸುಂದರಿ, ಕೊಂಡವೀಟಿ ದೊಂಗಾ, ಆದಿತ್ಯಾ 369 ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂತೆಯೇ ಅಮರೀಶ್ ಪುರಿ ಅವರು ಪೋಷಕ ಪಾತ್ರದಲ್ಲಿ ನಟಿಸಿದ್ದ ಶಾರುಖ್ ಖಾನ್, ಕಾಜೋಲ್ ಅಭಿನಯದ ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಚಿತ್ರ ಅಭೂತ ಪೂರ್ವ ಯಶಸ್ಸು ಗಳಿಸಿ ದಾಖಲೆಯ ಗಳಿಕೆ ಕಂಡಿತ್ತು.
Stay up to date on all the latest ಬಾಲಿವುಡ್ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp