ಬಿಗ್ ಬಾಸ್ ಮನೆಯಿಂದಲೇ ಸ್ಪರ್ಧಿಯನ್ನು ಎತ್ತಿ ಹಾಕಿಕೊಂಡು ಬಂದ ಪೊಲೀಸರು!

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಅಭಿಜಿತ್ ಬಿಚುಕಲೆ ಎಂಬುವರನ್ನು ಪೊಲೀಸರು ಸೆಟ್ ನಿಂದಲೇ ನೇರವಾಗಿ ಬಂಧಿಸಿರುವ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಅಭಿಜಿತ್ ಬಿಚುಕಲೆ ಎಂಬುವರನ್ನು ಪೊಲೀಸರು ಸೆಟ್ ನಿಂದಲೇ ನೇರವಾಗಿ ಬಂಧಿಸಿರುವ ಘಟನೆ ನಡೆದಿದೆ.
ಮರಾಠಿ ಬಿಗ್ ಬಾಸ್ ಎರಡನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಅಭಿಜಿತ್ ಬಿಚುಕಲೆ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಬಿಗ್ ಬಾಸ್ ಸೆಟ್ ಗೆ ಹೋದ ಪೊಲೀಸರು ಅಭಿಜಿತ್ ನನ್ನು ಬಂಧಿಸಿ ಕರೆ ತಂದಿದ್ದಾದರೆ.
ರಾಜಕೀಯ ಕಾರ್ಯಕರ್ತನಾಗಿರುವ ಅಭಿಜಿತ್ ಬಿಚುಕಲೆ ಅವರನ್ನು ರಾಜಕೀಯ ಕೋಟಾದ ಮೇಲೆ ಬಿಗ್ ಬಾಸ್ ಗೆ ಆಯ್ಕೆ ಮಾಡಲಾಗಿತ್ತು. 
ಚೆಕ್ ಬೌನ್ಸ್ ಪ್ರಕರಣ ಸಂಬಂಧ ಕೋರ್ಟ್ ವಾರೆಂಟ್ ನೀಡಿದ ಬಳಿಕ ಸತಾರಾ ಠಾಣೆ ಪೊಲೀಸರು ಮತ್ತು ಗೋರೆಗಾಂವ್ ಪೂರ್ವದ ಅರೆ ಕಾಲೋನಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸೇರಿ ಫಿಲ್ಮ್ ಸಿಟಿ ಮೈದಾನದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 2ರ ಸೆಟ್ ಗೆ ನೇರವಾಗಿ ಹೋಗಿ ಅಲ್ಲಿಂದಲೇ ಅಭಿಜಿತ್ ಅವರನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com