ನನಗೆ ಕಂಗನಾ ಅಂದರೆ ತುಂಬಾ ಇಷ್ಟ; ಅಥ್ಲೀಟ್ ದ್ಯುತಿ ಚಾಂದ್ ಹೀಗೆ ಹೇಳಿದ್ಯಾಕೆ?

ಭಾರತದ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ತಾನು ಸಲಿಂಗಕಾಮಿ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದು ಇದೀಗ ನನಗೆ ಕಂಗನಾ ರಣಾವತ್ ಅಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.
ಕಂಗನಾ ರಣಾವತ್-ದ್ಯುತಿ ಚಾಂದ್
ಕಂಗನಾ ರಣಾವತ್-ದ್ಯುತಿ ಚಾಂದ್
ಭಾರತದ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ತಾನು ಸಲಿಂಗಕಾಮಿ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದು ಇದೀಗ ನನಗೆ ಕಂಗನಾ ರಣಾವತ್ ಅಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.
ಸದ್ಯ ದ್ಯುತಿ ಚಾಂದ್ ಜೀವನಾಧಾರಿತ ಚಿತ್ರದ ಕುರಿತು ಬಾಲಿವುಡ್ ನಲ್ಲಿ ಭಾರೀ ಸುದ್ದಿ ಹರಿದಾಡುತ್ತಿದ್ದು ದ್ಯುತಿ ಚಾಂದ್ ಪಾತ್ರದಲ್ಲಿ ಯಾರು ಅಭಿನಯಿಸಿದರೆ ಚಂದ ಅನ್ನುವ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ನನ್ನ ಪಾತ್ರದಲ್ಲಿ ಕಂಗನಾ ರಣಾವತ್ ಅಭಿನಯಿಸಿದರೆ ಚನ್ನಾಗಿರುತ್ತೆ ಎಂದು ದ್ಯುತಿ ಚಾಂದ್ ಹೇಳಿಕೊಂಡಿದ್ದಾರೆ.
ಅಥ್ಲೀಟ್ ದ್ಯುತಿ ಸಲಿಂಗಕಾಮಿ ಅಂತ ಬಹಿರಂಗವಾಗಿ ಘೋಷಿಸಿಕೊಂಡ ಬೆನ್ನಲ್ಲೇ ಅವರ ಜೀವನಾಧಾರಿತ ಚಿತ್ರವನ್ನು ಮಾಡುವ ಉತ್ಸುಕದಲ್ಲಿರುವ ಬಾಲಿವುಡ್ ನಿರ್ದೇಶಕರು ಚಿತ್ರದ ರೈಟ್ಸ್ ಕೊಡುವಂತೆ ಚಾಂದ್ ರನ್ನು ಕೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com