ಮಕ್ಕಳಿಗಾಗಿ ಶಾಲೆ ಆರಂಭಿಸಲಿರುವ ಸನ್ನಿ ಲಿಯೋನ್

ಈಗಾಗಲೇ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಾಜಿ ನೀಲಿ ತಾರೆ ಹಾಗೂ ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್...

Published: 25th June 2019 12:00 PM  |   Last Updated: 25th June 2019 06:15 AM   |  A+A-


Sunny Leone to open school for toddlers

ಸನ್ನಿ ಲಿಯೋನ್

Posted By : LSB LSB
Source : UNI
ಮುಂಬೈ: ಈಗಾಗಲೇ ಸಾಮಾಜಿಕ ಸೇವೆಯಲ್ಲಿ  ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಾಜಿ ನೀಲಿ ತಾರೆ ಹಾಗೂ ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್, ಈಗ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆಯಲಿದ್ದಾರೆ.

ನಟನೆ, ನೃತ್ಯ ಹಾಗೂ ಸೌಂದರ್ಯ ವರ್ಧಕ ಜಾಹೀರಾತುಗಳಲ್ಲಿ ಮಿಂಚಿದ ಸನ್ನಿ, ಶೀಘ್ರವೇ ಶಿಕ್ಷಣ ರಂಗದಲ್ಲಿಯೂ ಪಾದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಮೂರು ಮಕ್ಕಳನ್ನು ದತ್ತು ಪಡೆದಿರುವ ಮಾಜಿ ನೀಲಿ ತಾರೆಗೆ ಮಕ್ಕಳೆಂದರೆ ತುಂಬಾ ಪ್ರೀತಿ.

ಸನ್ನಿ ಲಿಯೋನ್, ಸ್ವಂತ ಶಾಲಾ ಕಟ್ಟಡದ ವಿನ್ಯಾಸ, ಒಳಾಂಗಣ ಹಾಗೂ ವಿವಿಧ ಸೌಲಭ್ಯಗಳ ಕುರಿತು ರೂಪುರೇಷೆ ತಯಾರಿಸಿದ್ದಾರೆ. ಇದು ಸನ್ನಿ ಹಾಗೂ ಅವರ ಪತಿಯ ಕನಸಿನ ಕೂಸು. ಈ ಶಾಲೆಯಲ್ಲಿ ಮಕ್ಕಳು ಆಟವಾಡಲು ಹಾಗೂ ಸಮ್ಮೇಳನ ಏರ್ಪಡಿಸಲು ಅವಕಾಶವಿರಲಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸನ್ನಿ, '' ನಮ್ಮ ಉದ್ದೇಶ ಮಕ್ಕಳ ಬೌದ್ಧಿಕ, ಶಾರೀರಿಕ ವಿಕಾಸಕ್ಕೆ ವೇದಿಕೆ ಕಲ್ಪಿಸುವುದಾಗಿದೆ. ಮಕ್ಕಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು, ವಿಶ್ವದಲ್ಲಿನ ಹೊಸ ಹೊಸ ವಿಷಯಗಳನ್ನು ಅವರು ಕಲಿತುಕೊಳ್ಳಬೇಕು. ಹಾಗೆಯೇ ಮಜಾ ಮಾಡಬೇಕು ಎಂಬುದು ನಮ್ಮ ಆಸೆ ಎಂದು ತಿಳಿಸಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp