ಬಾಲಿವುಡ್ ನಟ ಆದಿತ್ಯ ಪಂಚೊಲಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಬಾಲಿವುಡ್ ನಟ ಆದಿತ್ಯ ಪಂಚೊಲಿ ವಿರುದ್ಧ ಅತ್ಯಾಚಾರ ಪ್ರಕರಣವನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. 36 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿರುವ ಆರೋಪವನ್ನು ಆದಿತ್ಯ ಪಂಚೊಲಿ ಎದುರಿಸುತ್ತಿದ್ದಾರೆ.

Published: 27th June 2019 12:00 PM  |   Last Updated: 27th June 2019 11:29 AM   |  A+A-


Aditya Pancholi

ಆದಿತ್ಯ ಪಂಚೊಲಿ

Posted By : ABN ABN
Source : PTI
ಮುಂಬೈ:  ಬಾಲಿವುಡ್ ನಟ ಆದಿತ್ಯ ಪಂಚೊಲಿ ವಿರುದ್ಧ ಅತ್ಯಾಚಾರ ಪ್ರಕರಣವನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. 36 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿರುವ ಆರೋಪವನ್ನು ಆದಿತ್ಯ ಪಂಚೊಲಿ ಎದುರಿಸುತ್ತಿದ್ದಾರೆ. ಆದರೆ, ಸುಳ್ಳಿನ ಪ್ರಕರಣವಾಗಿದ್ದು, ಕಾನೂನು ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ.

ಐಪಿಸಿ ಸೆಕ್ಷನ್ 376( ಅತ್ಯಾಚಾರ) 323 ( ಹಲ್ಲೆ ) 328  ಮತ್ತು 384 ರ ಅಡಿಯಲ್ಲಿ ಪಂಚೊಲಿ ವಿರುದ್ಧ  ವರ್ಸೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2004 ಹಾಗೂ 2009 ರ ನಡುವಿನ ಅವಧಿಯಲ್ಲಿ ಆಕೆಯ ಮೇಲೆ 54 ವರ್ಷದ ಆದಿತ್ಯ ಪಂಚೊಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ ಈ ಅವಧಿಯಲ್ಲಿ ಪೊಲೀಸರಿಗೆ ದೂರು ನೀಡಲು ಆಕೆ ಪ್ರಯತ್ನಿಸಿದಾಗ ಪಂಚೊಲಿ ಹಲ್ಲೆ  ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ವಕ್ತಾರ ಡಿಸಿಪಿ ಮಂಜುನಾಥ್ ಸಿಂಗ್ಟೆ ಹೇಳಿದ್ದಾರೆ. 

ಖಾಸಗಿ ಪೋಟೋಗಳನ್ನು ಆ ಮಹಿಳೆಯ ಕುಟುಂಬಸ್ಥರು ಹಾಗೂ ಗೆಳೆಯರಿಗೆ ತೋರಿಸದಿರಲು 1 ಕೋಟಿ ನೀಡುವಂತೆ ಪಂಚೊಲಿ ಬೇಡಿಕೆ ಇಟ್ಟಿದ್ದು, ಆಕೆಯಿಂದ 50 ಲಕ್ಷ ರೂಪಾಯಿ ಹಣ ಪಡೆದಿರುವುದಾಗಿ ಆಕೆ ಆರೋಪಿಸಿದ್ದಾರೆ. 

ತನಿಖೆ ಮುಂದುವರೆದಿದೆ ಆದಾಗ್ಯೂ, ಪಂಚೊಲಿಯನ್ನು ಇನ್ನೂ ವಿಚಾರಣೆ ನಡೆಸಿಲ್ಲ ಎಂದು ಮತ್ತೋರ್ವ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ಬೆಳವಣಿಗೆ  ಕುರಿತಂತೆ ಪ್ರತಿಕ್ರಿಯಿಸಿರುವ ಪಂಚೊಲಿ, ಇದು ತಮ್ಮ ವಿರುದ್ಧ ಮಾಡಿರುವ ಪಿತೂರಿ ಆಗಿದ್ದು, ಅವರ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಇದು ಸಣ್ಣ ಆರೋಪ ಅಲ್ಲ. ಕಾನೂನು ಹೋರಾಟ ನಡೆಸುತ್ತೇನೆ, ಸತ್ಯ ಹೊರಬರಲಿದೆ ಎಂದು ಅವರು ಹೇಳಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp