ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ: ಸನ್ನಿ ಲಿಯೋನ್

ಮಹೇಂದ್ರ ಸಿಂಗ್ ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ. ಏಕೆಂದರೆ ಅವರು ಒಬ್ಬ ಕೌಟುಂಬಿಕ ವ್ಯಕ್ತಿ ಎಂದು ಮಾಜಿ ನೀಲಿ ತಾರೆ....
ಸನ್ನಿ ಲಿಯೋನ್
ಸನ್ನಿ ಲಿಯೋನ್
ಮುಂಬೈ: ಮಹೇಂದ್ರ ಸಿಂಗ್ ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ. ಏಕೆಂದರೆ ಅವರು ಒಬ್ಬ ಕೌಟುಂಬಿಕ ವ್ಯಕ್ತಿ ಎಂದು ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಹೇಳಿದ್ದಾರೆ.
11ವಿಕೆಟ್ಸ್.ಕಾಮ್ ವೆಬ್ ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸನ್ನಿ, ನನ್ನ ನೆಚ್ಚಿನ ಕ್ರಿಕೆಟಿಗ ಧೋನಿ. ಅವರು ಅತ್ಯಂತ ಮುಂದಾದ ಮಗುವನ್ನು ಹೊಂದಿದ್ದಾರೆ. ನಾನು ಅವರು ಮಗುವಿನೊಂದಿಗೆ ಇರುವ ಫೋಟೋವನ್ನು ನೋಡಿದ್ದೇನೆ. ತುಂಬಾ ಸುಂದರವಾಗಿದೆ. ಅವರು ಒಬ್ಬ ಕೌಟುಂಬಿಕ ವ್ಯಕ್ತಿ. ಹೀಗಾಗಿ ಅವರು ನನಗೆ ಇಷ್ಟ ಎಂದರು.
ಈ ಹಿಂದೆಯೇ ತನಗೆ ಧೋನಿ ಇಷ್ಟ ಎಂದು ಹೇಳಿದ್ದ ಸನ್ನಿ, ಧೋನಿ ಎಷ್ಟೇ ಒತ್ತಡದಲ್ಲಿದ್ದರೂ ಕೂಲ್ ಆಗಿರುತ್ತಾರೆ. ಏನೇ ಅಸಾಧ್ಯವಾದ ಸಂದರ್ಭಗಳಿದ್ದರೂ ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿ ಕೊಡುವುದರೊಂದಿಗೆ ಅವರು ತುಂಬಾ ಪ್ರಭಾವಿತರಾಗಿದ್ದಾರೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com