ಮಾಜಿ ಪ್ರಧಾನಿ ಶಾಸ್ತ್ರೀಜಿ ಸಾವಿನ ರಹಸ್ಯವೇನು? ಮತ್ತೆ ಪ್ರಶ್ನೆ ಎತ್ತಿದ 'ತಾಷ್ಕೆಂಟ್​ ಫೈಲ್ಸ್' ಟ್ರೇಲರ್

ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸತ್ತದ್ದು ಹೇಗೆ? ಈ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಗೊತ್ತಿಲ್ಲ. ಈಗಿರುವಾಗ ಮಿಥುನ್ ಚಕ್ರವರ್ತಿ ಹಾಗೂ ನಾಸಿರುದ್ದೀನ್ ಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹಿಂದಿ ಚಿತ್ರ....
ಮಾಜಿ ಪ್ರಧಾನಿ ಶಾಸ್ತ್ರೀಜಿ ಸಾವಿನ ರಹಸ್ಯವೇನು? ಮತ್ತೆ ಪ್ರಶ್ನೆ ಎತ್ತಿದ 'ತಾಷ್ಕೆಂಟ್​ ಫೈಲ್ಸ್' ಟ್ರೇಲರ್
ಮಾಜಿ ಪ್ರಧಾನಿ ಶಾಸ್ತ್ರೀಜಿ ಸಾವಿನ ರಹಸ್ಯವೇನು? ಮತ್ತೆ ಪ್ರಶ್ನೆ ಎತ್ತಿದ 'ತಾಷ್ಕೆಂಟ್​ ಫೈಲ್ಸ್' ಟ್ರೇಲರ್
ಮುಂಬೈ: ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸತ್ತದ್ದು ಹೇಗೆ? ಈ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಗೊತ್ತಿಲ್ಲ. ಹೀಗಿರುವಾಗ ಮಿಥುನ್ ಚಕ್ರವರ್ತಿ ಹಾಗೂ ನಾಸಿರುದ್ದೀನ್ ಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹಿಂದಿ ಚಿತ್ರ  'ದಿ ತಾಷ್ಕೆಂಟ್ ಫೈಲ್ಸ್’ ದ ಟ್ರೈಲರ್ ಬಿಡುಗಡೆಯಾಗಿದ್ದು ಶಾಸ್ತ್ರಿಜಿ ಅವರನ್ನು ಕೊಲ್ಲಲಾಗಿತ್ತೆ ಎಂಬ ಪ್ರಶ್ನೆಯನ್ನು ಎತ್ತಿದೆ.
ವಿವೇಕ್ ರಂಜನ್  ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿರುವ ಈ ಚಿತ್ರದಲ್ಲಿ ಶಾಸ್ತ್ರಿ ಪ್ರಧಾನಿಯಾಗಿದ್ದಾಗ 1966ರಲ್ಲಿ ಉಜ್ಬೇಕಿಸ್ತಾನದ ತಾಷ್ಕೆಂಟ್​​​ನಲ್ಲಿ ಭಾರತ-ಪಾಕಿಸ್ತಾನ ನಡುವೆ ಶಾಂತಿ ಮಾತುಕತೆ ಒಪ್ಪಂದದ ಕುರುಇತು ವಿವರವಾದ ಕಥೆ ಇದೆ. ತಾಷ್ಕೆಂಟ್ ಒಪ್ಪಂದ ನಂತರ ಶಾಸ್ತ್ರಿ ನಿಗೂಢವಾಗಿ ಸಾವನ್ನಪ್ಪಿದ್ದರು. ಉಇದು ಹೃದಯಾಘಾತವೆ, ಕೊಲೆಯೆ ಎನ್ನುವ್ಬುದು ಎಲ್ಲರ ಸಂಶಯವಾಗಿದ್ದು ಇದಿ ಸಹಜ ಸಾವಲ್ಲ  ಎನ್ನುವುದು ಎಲ್ಲರ ಮಾತಾಗಿತ್ತು. ಇದನ್ನೇ ಈಗ 'ದಿ ತಾಷ್ಕೆಂಟ್ ಫೈಲ್ಸ್' ಚಿತ್ರದಲ್ಲಿ ತೋರಿಸಲಾಗಿದೆ.
ಭಾರತೀಯ ಚಲನಚಿತ್ರ ವಿಮರ್ಶಕ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಚಿತ್ರದ ಟ್ರೇಲರ್ ಹಂಚಿಕೊಂಡಿದ್ದಾರೆ. ಚಿತ್ರವು 12 ಏಪ್ರಿಲ್ 2019ರಂದು ತೆರೆ ಕಾಣಲಿದೆ.
ಟ್ರೇಲರ್ ಆಸಕ್ತಿದಾಯಕ ಮತ್ತು ಸಸ್ಪೆನ್ಸ್ ನಿಂದ ಕೂಡಿದ್ದು ಚಿತ್ರದ ಕುರಿತು ಆಸಕ್ತಿ ಕೆರಳಿಸುವಂತಿದೆ.
 ಮಿಥುನ್ ಹಾಗೂ ನಾಸಿರುದ್ದೀನ್ ಅಲ್ಲದೆ ಚಿತ್ರದಲ್ಲಿ . ಶ್ವೇತಾ ಬಸು ಪ್ರಸಾದ್, ಪಲ್ಲವಿ ಜೋಶಿ, ಪಂಕಜ್ ತ್ರಿಪಾಠಿ, ಮಂದಿರಾ ಬೇಡಿ, ರಾಜೇಶ್ ಶರ್ಮಾ, ಪ್ರಕಾಶ್ ಬೆಳವಾಡಿ  ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com