ಮದುವೆಗೂ ಮುನ್ನ ಗರ್ಭಿಣಿಯಾದ ಆ್ಯಮಿ ಜಾಕ್ಸನ್, 2020ರಲ್ಲಿ ವಿವಾಹ?

ಕಳೆದ ಜನವರಿ 1ರಂದು ಬಾಯ್ ಫ್ರೆಂಡ್ ಮಲ್ಟಿ ಮಿಲಿಯನೇರ್ ಜಾರ್ಜ್ ಪನಯೌಟು ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದ ಆ್ಯಮಿ ಜಾಕ್ಸನ್ ಇದೀಗ ಮದುವೆಗೂ...

Published: 31st March 2019 12:00 PM  |   Last Updated: 31st March 2019 05:39 AM   |  A+A-


Amy Jackson

ಆ್ಯಮಿ ಜಾಕ್ಸನ್

Posted By : VS VS
Source : Online Desk
ಕಳೆದ ಜನವರಿ 1ರಂದು ಬಾಯ್ ಫ್ರೆಂಡ್ ಮಲ್ಟಿ ಮಿಲಿಯನೇರ್ ಜಾರ್ಜ್ ಪನಯೌಟು ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದ ಆ್ಯಮಿ ಜಾಕ್ಸನ್ ಇದೀಗ ಮದುವೆಗೂ ಮುನ್ನವೇ ಗರ್ಭಿಣಿಯಾಗಿರುವುದಾಗಿ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಜನವರಿ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಶೇರ್ ಮಾಡಿದ್ದ ಆ್ಯಮಿ ಬಳಿಕ ತಮ್ಮ ಮದುವೆ ವಿಚಾರವನ್ನು ಎಲ್ಲರೂ ಪ್ರಸ್ತಾಪ ಮಾಡಿರಲಿಲ್ಲ. ಮೂಲಗಳ ಪ್ರಕಾರ 2020ರಲ್ಲಿ ಆ್ಯಮಿ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. 

ಈ ಮಧ್ಯೆ ಆ್ಯಮಿ ಜಾಕ್ಸನ್ ಅವರು ತಾಯಂದಿರ ದಿನದಂದೇ ತಾವು ಗರ್ಭೀಣಿಯಾಗಿರುವುದಾಗಿ ಪ್ರಕಟಿಸಿದ್ದಾರೆ. 

ಆ್ಯಮಿ ಜಾಕ್ಸನ್ ತನ್ನ ಭಾವಿ ಪತಿ ಜಾರ್ಜ್ ಅಪ್ಪಿಕೊಂಡಿರುವ ಫೋಟೋವೊಂದನ್ನು ಅಪ್ಲೋಡ್ ಮಾಡಿ ಜನವರಿ 1 2019, ನಮ್ಮ ಜೀವನದಲ್ಲಿ ಹೊಸ ಅಧ್ಯಾಯ. ಐ ಲವ್ ಯು. ಈ ಜಗತ್ತಿನಲ್ಲೇ ಅತ್ಯಂತ ಖುಷಿಯಾಗಿರುವಂತೆ ಮಾಡಿದ್ದಕ್ಕೆ ಧನ್ಯವಾದ. ಜೊತೆಗೆ ಉಂಗುರದ ಸಿಂಬಲ್ ಅನ್ನು ಹಾಕಿದ್ದಾರೆ.
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp