ಹಾರರ್-ಕಾಮಿಡಿ "ಕೊಕಾ ಕೊಲಾ" ಚಿತ್ರದಲ್ಲಿ ಸನ್ನಿ ಲಿಯೋನ್ ನಟನೆ

ಬಾಲಿವುಡ್ ಚಿತ್ರ ನಿರ್ಮಾಪಕ ಮಹೀಂದ್ರಾ ಧಾರಿವಾಲ್ "ಕೊಕಾ ಕೊಲಾ" ಚಿತ್ರ ನಿರ್ಮಿಸುತ್ತಿದ್ದು, ಸನ್ನಿ ಲಿಯೋನ್ ಅಭಿನಯಿಸುತ್ತಿದ್ದಾರೆ....

Published: 03rd May 2019 12:00 PM  |   Last Updated: 03rd May 2019 01:02 AM   |  A+A-


Sunny Leone

ಸನ್ನಿ ಲಿಯೋನ್

Posted By : SD SD
Source : UNI
ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾರರ್ - ಕಾಮಿಡಿ ಚಿತ್ರ "ಕೊಕಾ ಕೊಲಾ" ದಲ್ಲಿ ನಟಿಸಲಿದ್ದಾರೆ.

ಬಾಲಿವುಡ್ ಚಿತ್ರ ನಿರ್ಮಾಪಕ ಮಹೀಂದ್ರಾ ಧಾರಿವಾಲ್ "ಕೊಕಾ ಕೊಲಾ" ಚಿತ್ರ ನಿರ್ಮಿಸುತ್ತಿದ್ದು, ಸನ್ನಿ ಲಿಯೋನ್ ಅಭಿನಯಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದ್ದು, ಡೆಹರಾಡೂನ್, ಮಸ್ಸೂರಿ ಹಾಗೂ ಹರಿದ್ವಾರದ ಗ್ರಾಮೀಣ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಈ ಚಿತ್ರದಲ್ಲಿ ಅಭಿನಯಿಸಲು ಸನ್ನಿ ಲಿಯೋನ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರೇಕ್ಷಕರು ಇಂತಹ ಚಿತ್ರಗಳನ್ನು ಇಷ್ಟಪಡುತ್ತಿದ್ದು, ಚಿತ್ರ ತೆರೆಗೆ ತರಲು ಇದು ಸೂಕ್ತ ಸಮಯವಾಗಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. 

ಚಿತ್ರ ಶೀರ್ಷಿಕೆಯನ್ನು ಕೂಡ ನೋಂದಣಿ ಮಾಡಿಸಿಕೊಳ್ಳಲಾಗಿದ್ದು, ಇತರ ಪಾತ್ರಗಳಿಗಾಗಿ ನಟರನ್ನು ಶೀಘ್ರದಲ್ಲಿಯೇ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಧಾರಿವಾಲ್ ಹೇಳಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp