ರಾಜ್ ಕಪೂರ್ ಕನಸಿನ ಕೂಸು ಆರ್.ಕೆ. ಸ್ಟುಡಿಯೋ ಇನ್ನು ನೆನಪು ಮಾತ್ರ

ಬಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರ ನಿರ್ಮಾಣಕ್ಕೆ ನೆರವಾಗಿದ್ದ ನಟ, ನಿರ್ಮಾಪಕ ರಾಜ್ ಕಪೂರ್ ಕನಸಿನ ಕೂಸು ಆರ್.ಕೆ. ಸ್ಟುಡಿಯೋ ಇನ್ನು ನೆನಪು ಮಾತ್ರ
ಆರ್.ಕೆ. ಸ್ಟುಡಿಯೋ
ಆರ್.ಕೆ. ಸ್ಟುಡಿಯೋ
ಮುಂಬೈ: ಬಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರ ನಿರ್ಮಾಣಕ್ಕೆ ನೆರವಾಗಿದ್ದ ನಟ, ನಿರ್ಮಾಪಕ ರಾಜ್ ಕಪೂರ್ ಕನಸಿನ ಕೂಸು ಆರ್.ಕೆ. ಸ್ಟುಡಿಯೋ ಇನ್ನು ನೆನಪು ಮಾತ್ರ. ಕಪೂರ್ ಕುಟುಂಬದ ಒಡೆತನದಲ್ಲಿದ್ದ ಸ್ಟುಡಿಯೋವನ್ನು ಗೋದ್ರೆಜ್ ಪ್ರಾಪರ್ಟೀಸ್ ಲಿ. ರಿಯಲ್ ಎಸ್ಟೇಟ್ ಸಂಸ್ಥೆ ಖರೀದಿಸಿದೆ. ಸಂಸ್ಥೆಯು ಈ ಜಾಗದಲ್ಲಿ ವಸತಿ ಗೃಹ ಹಾಗೂ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ನಿರ್ಧರಿಸಿದೆ.
ಮುಂಬೈನ ಚೆಂಬೂರ್ ನಲ್ಲಿ 1948ರಲ್ಲಿ ಬಾಲಿವುಡ್ ನಟ ರಾಜ್ ಕಪೂರ್ 2.20 ಎಕರೆ ಜಾಗದಲ್ಲಿ ಈ ಆರ್.ಕೆ. ಸ್ಟುಡಿಯೋ ನಿರ್ಮಾಣ ಮಾಡಿದ್ದರು. "ಸತ್ಯಂ ಶಿವಂ ಸುಂದರಂ", " ರಾಮ್ ತೇರಿ ಗಂಗಾ ಮೈಲಿ" ಸೇರಿ ಅನೇಕ ಹಿಟ್ ಚಿತ್ರಗಳ ನಿರ್ಮಾಣಕ್ಕೆ ಈ ಸ್ಟುಡಿಯೋ ಸಾಕ್ಷಿಯಾಗಿತ್ತು. ಇದಲ್ಲದೆ"ಆಗ್", "ಬರ್ ಸಾತ್", "ಆವಾರಾ", "ಶ್ರೀ ೪೨೦", ""ಮೇರಾ ನಾಮ್ ಜೋಕರ್" ಇನ್ನೂ ಮೊದಲಾದ ಚಿತ್ರಗಳು ಇಲ್ಲಿ ಸೆಟ್ತೇರಿದ್ದವು.
ರಾಜ್ ಕಪೂರ್ 1988ರಲ್ಲಿ ಸಾವನ್ನಪ್ಪಿದ ಬಳಿಕ ಸಹ ಕೆಲ ಚಿತ್ರಗಳ ನಿರ್ಮಾಣಕ್ಕೆ ಸ್ಟುಡಿಯೋ ಸಾಕ್ಷಿಯಾಗಿತ್ತು. 
ಇನ್ನು ಸೆಫ್ಟೆಂಬರ್ 2017ರಲ್ಲಿ ಗೋದ್ರೆಜ್ ಸಂಸ್ಥೆ ಹಾಗೂ ಕಪೂರ್ ಕುಟುಂಬದ ನಡುವೆ ಸ್ಟುಡಿಯೋ ಖರೀದಿ ವ್ಯವಹಾರ ಪ್ರಾರಂಭವಾಗಿದ್ದು ಸುಮಾರು ಎಂಟು ತಿಂಗಳ ನಂತರ ಇಬ್ಬರ ನಡುವೆ ಒಪ್ಪಂದವಾಗಿದೆ.ಗೋದ್ರೇಜ್ ಸಂಸ್ಥೆ ಈ ಜಾಗದಲ್ಲಿ ವಸತಿ ಗೃಹ ಹಾಗೂ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಉದ್ದೇಶಿಸಿದ್ದು ಉದ್ದೇಶಿತ ಕಟ್ಟಡ 2020ರ ಒಳಗೆ ಪೂರ್ಣವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com