ಐಶ್ವರ್ಯಾ ರೈ ಕುರಿತ ಟ್ವೀಟ್ ನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ ವಿವೇಕ್ ಒಬೆರಾಯ್

ಬಾಲಿವುಡ್ ತಾರೆ ಐಶ್ವರ್ಯಾ ರೈ ಅವರ ವೈಯಕ್ತಿಕ ಜೀವನ ಕುರಿತ ಮೀಮ್ ಟ್ವೀಟ್ ನ್ನು ಶೇರ್ ಮಾಡಿ ...

Published: 21st May 2019 12:00 PM  |   Last Updated: 21st May 2019 12:36 PM   |  A+A-


Vivek Oberoi

ವಿವೇಕ್ ಒಬೆರಾಯ್

Posted By : SUD
Source : The New Indian Express
ಮುಂಬೈ: ಬಾಲಿವುಡ್ ತಾರೆ ಐಶ್ವರ್ಯಾ ರೈ ಅವರ ವೈಯಕ್ತಿಕ ಜೀವನ ಕುರಿತ ಮೀಮ್ ಟ್ವೀಟ್ ನ್ನು ಶೇರ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೆರಾಯ್ ಈಗ ಅದನ್ನು ಡಿಲೀಟ್ ಮಾಡಿದ್ದಾರೆ. ಐಶ್ವರ್ಯಾ ರೈರನ್ನು ಲೋಕಸಭೆ ಚುನಾವಣೆಯ ಸಾರ್ವಜನಿಕ ಅಭಿಪ್ರಾಯ, ಎಕ್ಸಿಟ್ ಪೋಲ್‌ಗೆ ಹೋಲಿಸಿ ಮಾಡಲಾಗಿದ್ದ ಮೀಮ್ ಟ್ವೀಟ್ ನ್ನು ವಿವೇಕ್ ಒಬೆರಾಯ್ ರಿಟ್ವೀಟ್ ಮಾಡಿ ಕಮೆಂಟ್ ಮಾಡಿದ್ದರು.

2000ನೇ ಇಸವಿಯ ಆರಂಭದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಜೊತೆ ಡೇಟಿಂಗ್ ನಲ್ಲಿದ್ದ ವಿವೇಕ್ ಒಬೆರಾಯ್ ಟ್ವೀಟ್ ಸಾಕಷ್ಟು ವಿವಾದಕ್ಕೆ ಒಳಗಾಗಿ ಹಲವಾರು ಮಂದಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

"ಒಮ್ಮೊಮ್ಮೆ ಕೆಲವು ಸಂಗತಿಗಳನ್ನು ನೋಡಿದ ಕೂಡಲೆ ನಮಗೆ ಫನ್ನಿ ಅನ್ನಿಸುತ್ತವೆ. ಆದರೆ ಕೆಲವರಿಗೆ ಆ ರೀತಿ ಅನ್ನಿಸುವುದಿಲ್ಲ. ಕಳೆದ ಹತ್ತು ವರ್ಷಗಳಿಂದ ನಾನು ಸುಮಾರು ಎರಡು ಸಾವಿರಕ್ಕೂ ಅಧಿಕ ಅಷ್ಟಾಗಿ ಸವಲತ್ತುಗಳಿಲ್ಲದ ಹೆಣ್ಣುಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ವಿಷಯ ಹೀಗಿರಬೇಕಾದರೆ ನಾನು ಓರ್ವ ಮಹಿಳೆ ಬಗ್ಗೆ ಕೆಟ್ಟದಾಗಿ ನಡೆದುಕೊಳ್ಳುತ್ತೇನೆ ಎಂಬುದನ್ನು ಊಹಿಸುವುದೂ ಕಷ್ಟ. ಯಾರೋ ಕ್ರಿಯೇಟ್ ಮಾಡಿದ ಒಂದು ಫೋಟೋಗೆ ತಮಾಷೆಗೆ ನಾನು ರಿಪ್ಲೈ ನೀಡುವುದರಿಂದ ಓರ್ವ ಮಹಿಳೆಗೆ ನೋವಾಗುತ್ತದೆ ಎಂದರೆ ನಾನು ಅವರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ. ಆ ಟ್ವೀಟನ್ನು ಡಿಲೀಟ್ ಮಾಡಿದ್ದೇನೆ" ಎಂದಿದ್ದಾರೆ ವಿವೇಕ್ ಒಬೆರಾಯ್.

ಯಾರೋ ಕಳುಹಿಸಿದ್ದ ಮೀಮನ್ನು ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು ವಿವೇಕ್ ಒಬೆರಾಯ್. "ಹಹ! ಒಳ್ಳೆ ಸೃಜನಾತ್ಮಕವಾಗಿದೆ! ಯಾವುದೇ ರಾಜಕೀಯ ಬೇಡ.... ಜಸ್ಟ್ ಲೈಫ್" ಎಂದು ಕಾಮೆಂಟ್ ಮಾಡಿ ಪೋಸ್ಟ್ ಮಾಡಿದ್ದರು.

ಈ ಟ್ವೀಟ್‌ಗೆ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಸೆಲೆಬ್ರಿಟಿಗಳಾದ ಸೋನಂ ಕಪೂರ್ ಮತ್ತು ಜ್ವಾಲಾ ಗುಟ್ಟಾ ಸಹ ವಿವೇಕ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಮಹಾರಾಷ್ಟ್ರ ಮಹಿಳಾ ಆಯೋಗ ಸಹ ವಿವೇಕ್ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು.

ನಿನ್ನೆ  ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದ ವಿವೇಕ್ ಒಬೆರಾಯ್, ನಾನು ಇದನ್ನು ಗಂಭೀರವಾಗಿ ಪರಿಗಣಿಸದೆ ಕೇವಲ ತಮಾಷೆಯಾಗಿ ತೆಗೆದುಕೊಂಡು ಬೇರೊಬ್ಬರ ಕ್ರಿಯೇಟಿವಿಟಿ ನೋಡಿ ಅದನ್ನು ಶೇರ್ ಮಾಡಿದೆಯಷ್ಟೆ. ಯಾರಾದರೊಬ್ಬರು ನಿಮ್ಮನ್ನು ತಮಾಷೆ ಮಾಡಿದರೆ ಅದಕ್ಕೆ ನೀವು ನಗಬೇಕೆ ಹೊರತು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂಬುದು ನನ್ನ ಅಭಿಪ್ರಾಯ ಎಂದಿದ್ದರು.
Stay up to date on all the latest ಬಾಲಿವುಡ್ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp