ಚಾಯ್, ಪಕೋಡಾ ಜತೆ ಮೋದಿ ವಿಜಯೋತ್ಸವ ಆಚರಿಸಿದ ಕಂಗನಾ

ಈ ಹಿಂದೆ ಚಾಯ್ ವಾಲಾ ಆಗಿದ್ದ ನರೇಂದ್ರ ಮೋದಿ ಪ್ರಧಾನಿ ಹುದ್ದೆ ತಲುಪುವ ಎತ್ತರಕ್ಕೆ ಬೆಳೆಯುತ್ತಾರೆ ಎಂಬುದೇ ನನಗೆ ಸ್ಫೂರ್ತಿ ಹಾಗೂ ಅವರೇ ನನಗೆ...

Published: 23rd May 2019 12:00 PM  |   Last Updated: 23rd May 2019 10:50 AM   |  A+A-


Kangana celebrates PM Modi's win with Chai and Pakoras

ಕಂಗನಾ ರಣೌತ್

Posted By : LSB LSB
Source : ANI
ನವದೆಹಲಿ: ಈ ಹಿಂದೆ ಚಾಯ್ ವಾಲಾ ಆಗಿದ್ದ ನರೇಂದ್ರ ಮೋದಿ ಪ್ರಧಾನಿ ಹುದ್ದೆ ತಲುಪುವ ಎತ್ತರಕ್ಕೆ ಬೆಳೆಯುತ್ತಾರೆ ಎಂಬುದೇ ನನಗೆ ಸ್ಫೂರ್ತಿ ಹಾಗೂ ಅವರೇ ನನಗೆ ಆದರ್ಶ ಎಂದು ಹೇಳಿದ್ದ ಬಾಲಿವುಡ್ ನಟಿ ಕಂಗನಾ ರಣೌತ್ ಅವರು ಗುರುವಾರ ಚಾಯ್ ಮತ್ತು ಪಕೋಡಾ ಜತೆ ಮೋದಿ ವಿಜಯೋತ್ಸವವನ್ನು ಆಚರಿಸಿದ್ದಾರೆ.

32 ವರ್ಷದ ನಟಿ ಕಂಗನಾ ಅವರು ಇಂದು ಸ್ವತಃ ತಾವೇ ತಮ್ಮ ಕುಟುಂಬದವರಿಗೆ ಚಾಯ್ ಮತ್ತು ಪಕೋಡಾ ಮಾಡುವ ಮೂಲಕ ಮೋದಿ ಹಾಗೂ ಬಿಜೆಪಿಯ ವಿಜಯೋತ್ಸವವನ್ನು ಆಚರಿಸಿದ್ದು, ಅದರ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಕಂಗನಾ ಅವರ ಫೋಟೋಗಳನ್ನು ಷೇರ್ ಮಾಡಿರುವ ಅವರ ಸಹೋದರಿ ರಂಗೋಲಿ ಅವರು, ಕಂಗನಾ ಅಡಿಗೆ ಮಾಡುವುದೇ ಅಪರೂಪ. ಇಂದು ನರೇಂದ್ರ ಮೋದಿ ಅವರಿಗಾಗಿ ಜಾಯ್ ಮತ್ತು ಪಕೋಡಾ ಮಾಡಿದ್ದಾರ ಎಂದು ಟ್ವೀಟ್ ಮಾಡಿದ್ದಾರೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp