ಚುನಾವಣೆಯಲ್ಲಿ ಮೋದಿ ದಿಗ್ವಿಜಯ: ಒಂದು ದಿನ ತಡವಾಗಿ ಶುಭಕೋರಿದ ಶಾರೂಖ್ ಖಾನ್!

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಗೆ ಭಾರೀ ಬಹುಮತ ಸಿಕ್ಕಿದ ಹಿನ್ನೆಲೆಯಲ್ಲಿ ವಿಶ್ವದ ಘಟಾನುಘಟಿ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಸೇರಿನಾನಾ ಕ್ಷೇತ್ರದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.

Published: 25th May 2019 12:00 PM  |   Last Updated: 25th May 2019 12:50 PM   |  A+A-


Shah Rukh Khan wishes to Narendra Modi for his grate victory in Lok Sabha polls

ಚುನಾವಣೆಯಲ್ಲಿ ಮೋದಿ ದಿಗ್ವಿಜಯ: ಒಂದು ದಿನ ತಡವಾಗಿ ಶುಭಕೋರಿದ ಶಾರೂಖ್ ಖಾನ್!

Posted By : RHN RHN
Source : Online Desk
ಮುಂಬೈ: ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಗೆ ಭಾರೀ ಬಹುಮತ ಸಿಕ್ಕಿದ ಹಿನ್ನೆಲೆಯಲ್ಲಿ ವಿಶ್ವದ ಘಟಾನುಘಟಿ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಸೇರಿ ನಾನಾ ಕ್ಷೇತ್ರದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಈ ನಡುವೆ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ತಾವು ಒಂದು ದಿನ ತಡವಾಗಿ ಮೋದಿಗೆ ಶುಭಾಶಯ ಹೇಳಿದ್ದಾರೆ.

"ಹೆಮ್ಮೆಯ ಭಾರತೀಯರಾದ ನಾವು ಸ್ಪಷ್ಟತೆ ಇರುವ ಸರ್ಕಾರವನ್ನೇ ಆಯ್ಕೆ ಮಾಡಿದ್ದೇವೆ. ಈಗ ನಮ್ಮ ಭರವಸೆ, ಕನಸು ಈಡೇರಿಸಿಕೊಳ್ಳಬೇಕಿದೆ.ಇದು ಜನಾದೇಶ, ಪ್ರಜಾಪ್ರಭುತ್ವದ ಜಯ. ನರೇಂದ್ರ ಮೋದಿ, ಬಿಜೆಪಿ ಸಂಸದರಿಗೆ ಶುಭಾಶಯಗಳು" ಎಂದುಶಾರೂಖ್ ಟ್ವಿಟ್ ಮಾಡಿದ್ದಾರೆ.
ಇದಕ್ಕೆ ಮುನ್ನ ಗುರುವಾರ ಖ್ಯಾತ ನಟ ಸಲ್ಮಾನ್ ಖಾನ್ ನರೇಂದ್ರ ಮೋದಿಗೆ ಶುಭಾಶಯ  ಹೇಳಿ ಟ್ವಿಟ್ ಮಾಡಿದ್ದರು.ಇನ್ನು ಅಜಯ್ ದೇವಗನ್ ಸೇರಿ ಅನೇಕ ಬಾಲಿವುಡ್ ನಟ ನಟಿಯರು ಲೋಕಸಮರದ ಗೆಲುವಿಗಾಗಿ ಮೋದಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. 
Stay up to date on all the latest ಬಾಲಿವುಡ್ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp