ಚಿತ್ರರಂಗದಲ್ಲಿ 'ಸುವರ್ಣ ವರ್ಷ'ಗಳನ್ನು ಪೂರೈಸಿದ ಅಮಿತಾಬ್ ಬಚ್ಚನ್: ಪುತ್ರ ಅಭಿಷೇಕ್ ರಿಂದ ಹೃದಯಸ್ಪರ್ಶಿ ಸಂದೇಶ 

ಬಾಲಿವುಡ್ ಮೆಗಾಸ್ಟಾರ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅಮಿತಾಬ್ ಬಚ್ಚನ್ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳನ್ನು ಪೂರೈಸುತ್ತಿದ್ದಾರೆ. 

Published: 07th November 2019 02:27 PM  |   Last Updated: 07th November 2019 02:27 PM   |  A+A-


Amitabh Bachchan-Abhishek Bachchan

ಅಮಿತಾಬ್ ಬಚ್ಚನ್-ಅಭಿಷೇಕ್ ಬಚ್ಚನ್

Posted By : Sumana Upadhyaya
Source : ANI

ನವದೆಹಲಿ: ಬಾಲಿವುಡ್ ಮೆಗಾಸ್ಟಾರ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅಮಿತಾಬ್ ಬಚ್ಚನ್ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳನ್ನು ಪೂರೈಸುತ್ತಿದ್ದಾರೆ. 


ಈ ಖುಷಿಯ ಗಳಿಗೆಯಲ್ಲಿ ಅವರ ಪುತ್ರ ಅಭಿಷೇಕ್ ಬಚ್ಚನ್ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿರುವ ಅಭಿಷೇಕ್ ಬಚ್ಚನ್, ಸುದೀರ್ಘ ಪತ್ರದೊಂದಿಗೆ ತಮ್ಮ ತಂದೆಯ ಯೌವ್ವನದ ಸುಂದರ ಕಪ್ಪು-ಬಿಳುಪಿನ ಚಿತ್ರ ಹಂಚಿಕೊಂಡಿದ್ದಾರೆ.


ಕೇವಲ ನಿಮ್ಮ ಮಗನಾಗಿ ಮಾತ್ರವಲ್ಲದೆ, ನಟನಾಗಿ ಮತ್ತು ಅಭಿಮಾನಿಯಾಗಿ ಶ್ರೇಷ್ಠತೆಯನ್ನು ಕಾಣುವ ಅದೃಷ್ಟವನ್ನು ನಾವು ಹೊಂದಿದ್ದೇವೆ. ನಿಮ್ಮನ್ನು ಪ್ರಶಂಸಿಸಲು, ನಿಮ್ಮಿಂದ ಕಲಿಯಲು ಮತ್ತು ನಿಮ್ಮನ್ನು ಹೊಗಳಲು ಇನ್ನೂ ಸಾಕಷ್ಟು ಇದೆ. 


ಸಿನಿಮಾವನ್ನು ಪ್ರೀತಿಸುವ ಹಲವು ತಲೆಮಾರಿನವರು ನಾವು ಬಚ್ಚನ್ ಕಾಲದಲ್ಲಿ ಬದುಕಿದ್ದೇವೆ ಎಂದು ಹೇಳಿಕೊಳ್ಳುವುದೇ ಖುಷಿ. ಚಿತ್ರಜಗತ್ತಿನಲ್ಲಿ ಸುವರ್ಣ ವರ್ಷಗಳನ್ನು ಪೂರೈಸುತ್ತಿರುವ ನಿಮಗೆ ಅಭಿನಂದನೆಗಳು ಅಪ್ಪಾ, ಮುಂದಿನ 50 ವರ್ಷಗಳಿಗೆ ನಾವು ಕಾಯುತ್ತಿದ್ದೇವೆ ಎಂದು 43 ವರ್ಷದ ನಟ ಅಭಿಷೇಕ್ ಬಚ್ಚನ್ ತಮ್ಮ ತಂದೆಯ ಬಗ್ಗೆ ಪ್ರೀತಿಯ ಮಾತುಗಳನ್ನು ಹೇಳಿದ್ದಾರೆ.


ಬಾಲಿವುಡ್ ನ ಷೆಹನ್ ಷಾ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಅಮಿತಾಬ್ ಬಚ್ಚನ್ ಹಿಂದಿ ಚಿತ್ರರಂಗದಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದ್ದು 1969ರಲ್ಲಿ ಸಾತ್ ಹಿಂದೂಸ್ತಾನಿ ಚಿತ್ರದ ಮೂಲಕ. 1970ರಲ್ಲಿ ತೆರೆಗೆ ಬಂದ ಜಂಜೀರ್, ದೀವಾರ್ ಮತ್ತು ಶೋಲೆ ಚಿತ್ರಗಳ ಮೂಲಕ ಜನಪ್ರಿಯರಾದರು. ಕಳೆದ 5 ದಶಕಗಳಲ್ಲಿ 190ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


ಇವರ ಅಗ್ನೀಪಥ್, ಬ್ಲಾಕ್, ಪಾ ಮತ್ತು ಪಿಕು ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2015ರಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವ ಪದ್ಮ ವಿಭೂಷಣಕ್ಕೆ ಪಾತ್ರರಾಗಿದ್ದರು. ಇತ್ತೀಚೆಗೆ ಅಮಿತಾಬ್ ಬಚ್ಚನ್ ಕಾಣಿಸಿಕೊಂಡ ಚಿತ್ರ 'ಬದ್ಲಾ'. 

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp