ಕೆಬಿಸಿ ಛತ್ರಪತಿ ಶಿವಾಜಿ ಮಹಾರಾಜ್ ವಿವಾದ: ಕ್ಷಮೆಯಾಚಿಸಿದ ಬಿಗ್ ಬಿ

ಕೌನ್ ಬನೇಗಾ ಕರೋಡ್​ಪತಿ(ಕೆಬಿಸಿ)ಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್​ ಅವರಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಶನಿವಾರ ಕ್ಷಮೆಯಾಚಿಸಿದ್ದಾರೆ.
ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್

ಮುಂಬೈ: ಕೌನ್ ಬನೇಗಾ ಕರೋಡ್​ಪತಿ(ಕೆಬಿಸಿ)ಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್​ ಅವರಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಶನಿವಾರ ಕ್ಷಮೆಯಾಚಿಸಿದ್ದಾರೆ.

ಕಳೆದ ನವೆಂಬರ್ 6ರಂದು ಪ್ರಸಾರವಾದ ಕೆಬಿಸಿಯಲ್ಲಿ 'ಈ ನಾಯಕರಲ್ಲಿ ಯಾರು ಮೊಘಲ್ ಸಾಮ್ರಾಟ ಔರಂಗಜೇಬ್​ಗೆ ಸಮಕಾಲೀನರು?' ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಮಹಾರಾಜ ಪ್ರತಾಪ್, ರಾಣಾ ಸಂಗ, ಮಹಾರಾಜ ರಂಜಿತ್ ಸಿಂಗ್, ಶಿವಾಜಿ ಎಂಬ 4 ಆಯ್ಕೆಗಳನ್ನು ಕೊಡಲಾಗಿತ್ತು.

ಈ ಪ್ರಶ್ನೆಯಿಂದ ಮರಾಠಿಗರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಟ್ವಿಟ್ಟರ್​ನಲ್ಲಿ #BoycuttKBC ಎಂಬ ಅಭಿಯಾನ ಶುರುವಾಗಿತ್ತು. ಈ ಪ್ರಶ್ನೆಯ ಸ್ಕ್ರೀನ್​ಶಾಟ್ ಹಾಕಿ ಅನೇಕರು ಖಾಸಗಿ ವಾಹಿನಿ ಮತ್ತು ಅಮಿತಾಭ್ ಬಚ್ಚನ್ ವಿರುದ್ಧ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಮೊಘಲ್ ರಾಜ ಔರಂಗಜೇಬ್​ಗೆ ಸಾಮ್ರಾಟ ಎಂದು ಕರೆದಿರುವ ಆಯೋಜಕರು, ಆಯ್ಕೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಎಂದು ಬರೆಯುವ ಬದಲು ಕೇವಲ ಶಿವಾಜಿ ಎಂದು ಬರೆಯುವ ಮೂಲಕ ಅವಮಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು.

ಇಂದು ಈ ಕುರಿತು ಟ್ವೀಟ್ ಮಾಡಿರುವ ಬಿಗ್ ಬಿ, ಛತ್ರಪತಿ ಶಿವಾಜಿ ಮಹಾರಾಜ್ ಗೆ ಯಾವುದೇ ಕಾರಣಕ್ಕೂ 
ಅಗೌರವ ತೋರುವುದಿಲ್ಲ. ಇದರಿಂದ ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com