ಬಾಲಿವುಡ್ ನಟಿ ರಾಣಿ ಮುಖರ್ಜಿಗೆ ‘ಪ್ರಭಾವಶಾಲಿ ನಟಿ’ ಪ್ರಶಸ್ತಿ

ಬಾಲಿವುಡ್ ನಟಿ ರಾಣಿ ಮುಖರ್ಜಿ ತಮ್ಮ ‘ಹಿಚ್ಕಿ’ ಚಿತ್ರಕ್ಕಾಗಿ ಅತ್ಯಂತ ಪ್ರಭಾವಶಾಲಿ ಸಿನಿಮಾ ನಟಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.
 

Published: 11th November 2019 03:30 PM  |   Last Updated: 11th November 2019 03:30 PM   |  A+A-


ರಾಣಿ ಮುಖರ್ಜಿ

Posted By : Raghavendra Adiga
Source : UNI

ಬಾಲಿವುಡ್ ನಟಿ ರಾಣಿ ಮುಖರ್ಜಿ ತಮ್ಮ ‘ಹಿಚ್ಕಿ’ ಚಿತ್ರಕ್ಕಾಗಿ ಅತ್ಯಂತ ಪ್ರಭಾವಶಾಲಿ ಸಿನಿಮಾ ನಟಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನೈಋತ್ಯ ಏಷಿಯಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ರಾಣಿ ಮುಖರ್ಜಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಣಿ ಸಿದ್ದಾರ್ಥ್ ಪಿ.ಮಲ್ಹೋತ್ರ ನಿರ್ದೇಶನದ ‘ಹಿಚ್ಕಿ’ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಣಿ, ಈ ಪ್ರಶಸ್ತಿ ದೊರೆತಿರುವುದಕ್ಕೆ ಸಂತಸವಾಗಿದೆ. ಕೆಲ ಚಿತ್ರಗಳು ಜನರನ್ನು ಚಿಂತಿಸುವಂತೆ ಮಾಡಿ ಅವರ ಮನಸ್ಸು, ಹೃದಯದಲ್ಲಿ ಮನೆ ಮಾಡಿ ಬಿಡುತ್ತದೆ. ನನಗೆ ಅಂತಹ ಚಿತ್ರಗಳಲ್ಲಿ ನಟಿಸುವುದೆಂದರೆ ಇಷ್ಟ ಎಂದಿದ್ದಾರೆ

“ನನ್ನ ಸುತ್ತ ಏನು ನಡೆಯುತ್ತದೆ ಅದಕ್ಕೆ ದ್ಧ್ವನಿ ನೀಡುವುದು ನನ್ನ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಹಿಚ್ಕಿ ಅಂತಹ ಒಂದು ಚಿತ್ರ ಮತ್ತು ಇಂತಹಾ ಸಂದೇಶವು ವಿಶ್ವಾದ್ಯಂತ ಪ್ರೇಕ್ಷಕರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮುಖ್ಯವಾಗಿ ಟುರೆಟ್ ಸಿಂಡ್ರೋಮ್ ವಿರುದ್ಧ ಹೋರಾಡುವ ಜನರನ್ನು ಪ್ರೇರೇಪಿಸುತ್ತದೆ. ಸಾಮಾನ್ಯ ಸಾರ್ವತ್ರಿಕ ಕಥೆ ಹೊಂದಿರುವ ಚಿತ್ರವನ್ನು ನಿಜಕ್ಕೂ ಜಗತ್ತು ಒಪ್ಪಿಕೊಳ್ಳುತ್ತದೆ."

ರಾಣಿ ಮುಖರ್ಜಿ ಇನ್ನು ಯಶ್ ರಾಜ್ ಫಿಲಮ್ಸ್ ನ "ಮರ್ದಾನಿ 2" ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಅವರು ಶಿವಾನಿ ಶಿವಾಜಿರಾಯನ ಪಾತ್ರಧಾರಿಯಾಗಿದ್ದು 2019 ರ ಡಿಸೆಂಬರ್ 13 ರಂದು ಚಿತ್ರ ವಿಶ್ವಾದ್ಯಂತ ತೆರೆ ಕಾಣಲಿದೆ.
 

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp