ಅತಿಯಾದ ಮೋಜು ಮಸ್ತಿಯಿಂದ ಅನಾರೋಗ್ಯಕ್ಕೀಡಾದ ದೀಪಿಕಾ!

ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೆ ಹುಶಾರಿಲ್ವಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ಬೆಂಗಳೂರು/ಮುಂಬೈ: ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೆ ಹುಶಾರಿಲ್ವಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ತನ್ನ ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಪಾಲ್ಗೊಂಡಿದ್ದ ದೀಪಿಕಾ ವಿವಾಹ ಕಾರ್ಯಕ್ರಮಗಳಲ್ಲಿ ಪತಿ ರಣ್ವೀರ್ ಸಿಂಗ್ ಜೊತೆಗೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರು. ಹೀಗಾಗಿ ಆರೋಗ್ಯ ಕೊಂಚ ಏರುಪೇರಾಗಿದ್ದು, ಸುಸ್ತು ಮತ್ತು ಜ್ವರದಿಂದ ಬಳಲುತ್ತಿದ್ದಾರೆ.

ಲೇಟೆಸ್ಟ್ ಇನ್ಸ್ಟಾಗ್ರಾಮ್‌ನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಫೋಟೊ ಹಾಕಿಕೊಂಡಿರುವ ದೀಪಿಕಾ, "ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಅತಿಯಾಗಿ ಮಸ್ತಿ ಮಾಡಿದಾಗ..” ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.

ಈ ಫೋಟೋದಲ್ಲಿ ಥರ್ಮಾಮೀಟರ್‌ನ್ನು ದೀಪಿಕಾ ಬಾಯಿಯಲ್ಲಿಟ್ಟುಕೊಂಡಿದ್ದು, ವಿಥ್ಔಟ್ ಮೇಕಪ್‌ನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com