ಜೂನಿಯರ್ ಆರ್ಟಿಸ್ಟ್ ನಿಂದ ಅತ್ಯಾಚಾರ, ಗರ್ಭಿಣಿಯಾದ 'ಕಹಾನಿ ಘರ್ ಘರ್ ಕಿ' ನಟಿ

ಕಹಾನಿ ಘರ್ ಘರ್ ಕಿ, ಮೇ ನಿಕ್ಲಾ ಹೊಗಾ ಚಾಂದ್ ಹಾಗೂ ನಾಚ್ ಬಲಿಯೆ ಸೇರಿದಂತೆ ಹಲವು ಹಿಂದಿ ಧಾರವಾಹಿಗಳಲ್ಲಿ ನಟಿಸುತ್ತಿದ್ದ ನಟಿಯ ಮೇಲೆ ಜೂನಿಯರ್ ಆರ್ಟಿಸ್ಟ್ ಅತ್ಯಾಚಾರ ಎಸಗಿದ್ದು, ಪರಿಣಾಮ ನಟಿ ಗರ್ಭಿಣಿಯಾಗಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಕಹಾನಿ ಘರ್ ಘರ್ ಕಿ, ಮೇ ನಿಕ್ಲಾ ಹೊಗಾ ಚಾಂದ್ ಹಾಗೂ ನಾಚ್ ಬಲಿಯೆ ಸೇರಿದಂತೆ ಹಲವು ಹಿಂದಿ ಧಾರವಾಹಿಗಳಲ್ಲಿ ನಟಿಸುತ್ತಿದ್ದ ನಟಿಯ ಮೇಲೆ ಜೂನಿಯರ್ ಆರ್ಟಿಸ್ಟ್ ಅತ್ಯಾಚಾರ ಎಸಗಿದ್ದು, ಪರಿಣಾಮ ನಟಿ ಗರ್ಭಿಣಿಯಾಗಿರುವ ಘಟನೆ ನಡೆದಿದೆ.

ಹೋಟಲ್ ನ ರೂಮ್ ನಲ್ಲಿ ಜೂನಿಯರ್ ಆರ್ಟಿಸ್ಟ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಪರಿಣಾಮ ತಾನು ಗರ್ಭಿಣಿಯಾಗಿದ್ದೆ ಎಂದು ಕಹಾನಿ ಘರ್ ಘರ್ ಕಿ' ನಟಿ ಆರೋಪಿಸಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿದ್ದು, ಮುಂಬೈ ಮೂಲದ ನಟಿ, ಹರಿಯಾಣದ ಯಮುನಾನಗರದ ನಿವಾಸಿ ಕಿರಿಯ ಕಲಾವಿದನೊಂದಿಗೆ ಸ್ನೇಹ ಬೆಳೆಸಿದ್ದರು. ಒಂದು ದಿನ ಇಬ್ಬರು ಹೋಟೆಲ್ ನ ರೂಮ್ ನಲ್ಲಿದ್ದಾಗ ಜೂನಿಯರ್ ಆರ್ಟಿಸ್ಟ್ ತನಗೆ ಡ್ರಗ್ ನೀಡಿ, ಅತ್ಯಾಚಾರ ಎಸಗಿರುವುದಾಗಿ ನಟಿ ಆರೋಪಿಸಿದ್ದಾರೆ.

ಈಗ ತಾನು ಗರ್ಭಿಣಿಯಾಗಿದ್ದು, ಮದುವೆಯಾಗುಂತೆ ಆತನನ್ನು ಕೇಳಿಕೊಂಡರೆ ಮದುವೆಗೆ ನಿರಾಕರಿಸುತ್ತಿರುವುದಾಗಿ ನಟಿ ದೂರಿದ್ದಾರೆ.

ಈ ಸಂಬಂಧ ನಟಿ ಯಮುನಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಜೂನಿಯರ್ ಆರ್ಟಿಸ್ಟ್ ನಾಪತ್ತೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com