'ಸೊಂಟದ ವಿಷ್ಯ ಬೇಡವೋ ಶಿಷ್ಯ': ಸಾರ್ವಜನಿಕವಾಗಿ ದೀಪಿಕಾ ಸೊಂಟ ನೋಡಿದ ರಣವೀರ್, ಫೋಟೋ ವೈರಲ್!

ಕಿಚ್ಚ ಸುದೀಪ್ ಅಭಿನಯಿಸಿದ್ದ ಚಂದು ಚಿತ್ರದಲ್ಲಿ ಸೊಂಟದ ವಿಷ್ಯ ಬೇಡವೋ ಶಿಷ್ಯ, ಸೊಂಟಕ್ಕಿಂತ ವಾಸಿಕಣೋ ಗುಂಡಿನ ದಾಸ್ಯ ಫೇಮಸ್ ಹಾಡೊಂದಿತ್ತು. ಈ ಸೊಂಟವನ್ನು ನೋಡಿ ಹಳ್ಳಕ್ಕೆ ಬೀಳದವರೆ ಇಲ್ಲ ಎಂದು ಹೇಳಬಹುದು. ಅದೇ ರೀತಿ ಸಾರ್ವಜನಿಕವಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ...

Published: 14th October 2019 04:00 PM  |   Last Updated: 14th October 2019 04:00 PM   |  A+A-


Deepika-Ranveer Singh

ದೀಪಿಕಾ ಪಡುಕೋಣೆ-ರಣವೀರ್ ಸಿಂಗ್

Posted By : Vishwanath S
Source : Online Desk

ಮುಂಬೈ: ಕಿಚ್ಚ ಸುದೀಪ್ ಅಭಿನಯಿಸಿದ್ದ ಚಂದು ಚಿತ್ರದಲ್ಲಿ ಸೊಂಟದ ವಿಷ್ಯ ಬೇಡವೋ ಶಿಷ್ಯ, ಸೊಂಟಕ್ಕಿಂತ ವಾಸಿಕಣೋ ಗುಂಡಿನ ದಾಸ್ಯ ಫೇಮಸ್ ಹಾಡೊಂದಿತ್ತು. ಈ ಸೊಂಟವನ್ನು ನೋಡಿ ಹಳ್ಳಕ್ಕೆ ಬೀಳದವರೆ ಇಲ್ಲ ಎಂದು ಹೇಳಬಹುದು. ಅದೇ ರೀತಿ ಸಾರ್ವಜನಿಕವಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಸೊಂಟವನ್ನು ನೋಡುತ್ತಿರುವ ಫೋಟೋವನ್ನು ನಟ ರಣವೀರ್ ಸಿಂಗ್ ಶೇರ್ ಮಾಡಿದ್ದು ಈ ಫೋಟೋ ಇದೀಗ ಸಖತ್ ವೈರಲ್ ಆಗಿದ್ದು ರಣವೀರ್ ಈ ಕೃತ್ಯಕ್ಕೆ ದೀಪಿಕಾ ಖಡಕ್ ಉತ್ತರ ನೀಡಿದ್ದಾರೆ. 

100%

2013ರಲ್ಲಿ ರಾಮ್ ಲೀಲಾ ಚಿತ್ರದ ಚಿತ್ರೀಕರಣದ ವೇಳೆ ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಅವರ ಸೊಂಟವನ್ನು ನೋಡುತ್ತಿರುವ ಫೋಟೋವನ್ನು ಈ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿ ಈ ಫೋಟೋಗೆ ಯಾವುದೇ ಕ್ಯಾಪ್ಶನ್ ಅಗತ್ಯವಿಲ್ಲ ಎಂದು ಬರೆದುಕೊಂಡಿದ್ದರು. ಈ ಫೋಟೋ ವೈರಲ್ ಆಗಿತ್ತು. 

100%

ಇದಕ್ಕೆ ದೀಪಿಕಾ ಪಡುಕೋಣೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದು ಏಳು ವರ್ಷವಾಗಿದೆ. ಆದರೆ ಹೀಗಲೂ ಏನು ಬದಲಾವಣೆಯಾಗಿಲ್ಲ ಎಂದು ಕಮೆಂಟ್ ಮಾಡಿ ಜೊತೆಗೆ ಹೃದಯದ ಎಮೋಜಿಯನ್ನು ಹಾಕಿದ್ದಾರೆ. 

100%

ಸದ್ಯ ಈ ಫೋಟೋವನ್ನು ಬರೋಬ್ಬರಿ 23 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ದೀಪಿಕಾ ಮತ್ತು ರಣವೀರ್ ಸಿಂಗ್ 2018ರ ನವೆಂಬರ್ 15ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

 

 
 
 
 
 
 
 
 
 
 
 
 
 

No caption needed @deepikapadukone #RamLeela

A post shared by Ranveer Singh (@ranveersingh) on

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp