ರಿಯಾಲಿಟಿ ಶೋ ತೀರ್ಪುಗಾರ್ತಿಗೆ ಬಲವಂತವಾಗಿ ಕಿಸ್ ಕೊಟ್ಟ ಸ್ಪರ್ಧಿ, ಕಣ್ಣೀರಿಟ್ಟ ನೇಹಾ ಕಕ್ಕರ್, ವಿಡಿಯೋ ವೈರಲ್!

ಇಂಡಿಯನ್ ಐಡಲ್ 11ರ ಆಡಿಶನ್ ವೇಳೆ ಸ್ಪರ್ಧಿಯೊಬ್ಬ ತೀರ್ಪುಗಾರ್ತಿ ನೇಹಾ ಕಕ್ಕರ್ ಗೆ ಬಲವಂತವಾಗಿ ಕಿಸ್ ಮಾಡಿರುವ ಘಟನೆ ನಡೆದಿದೆ. ಇನ್ನು ನೇಹಾ ಕಕ್ಕರ್ ವೇದಿಕೆಯಲ್ಲೇ ಕಣ್ಣೀರಿಟ್ಟಿರುವ ವಿಡಿಯೋ ವೈರಲ್ ಆಗಿದೆ. 

Published: 17th October 2019 03:31 PM  |   Last Updated: 17th October 2019 03:43 PM   |  A+A-


Neha kakkar

ನೇಹಾ ಕಕ್ಕರ್

Posted By : Vishwanath S
Source : Online Desk

ಇಂಡಿಯನ್ ಐಡಲ್ 11ರ ಆಡಿಶನ್ ವೇಳೆ ಸ್ಪರ್ಧಿಯೊಬ್ಬ ತೀರ್ಪುಗಾರ್ತಿ ನೇಹಾ ಕಕ್ಕರ್ ಗೆ ಬಲವಂತವಾಗಿ ಕಿಸ್ ಮಾಡಿರುವ ಘಟನೆ ನಡೆದಿದೆ. ಇನ್ನು ನೇಹಾ ಕಕ್ಕರ್ ವೇದಿಕೆಯಲ್ಲೇ ಕಣ್ಣೀರಿಟ್ಟಿರುವ ವಿಡಿಯೋ ವೈರಲ್ ಆಗಿದೆ.

100%

ಇಂಡಿಯನ್ ಐಡಲ್ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಗಾಯಕಿ ನೇಹಾ ಕಕ್ಕರ್ ತೀರ್ಪುಗಾರ್ತಿಯಾಗಿದ್ದಾರೆ. ಇದೇ ಕಾರ್ಯಕ್ರಮದ ವೇಳೆ ಉತ್ತಮವಾಗಿ ಹಾಡಿದ್ದ ಸ್ಪರ್ಧಿಯೊಬ್ಬನನ್ನು ಅಭಿನಂದಿಸಲು ವೇದಿಕೆ ಮೇಲೆ ಬಂದ ನೇಹಾಗೆ ಸ್ಪರ್ಧಿ ಬಲವಂತವಾಗಿ ಮುತ್ತು ನೀಡಿದ್ದಾರೆ. 

100%

ಸ್ಪರ್ಧಿ ನೇಹಾರನ್ನು ಇಂಪ್ರೆಸ್ ಮಾಡಲು ಯತ್ನಿಸಿದ್ದಾನೆ. ನೇಹಾರಿಗೆ ಸ್ಪರ್ಧಿ ಉಡುಗೊರೆಯೊಂದನ್ನು ತಂದಿದ್ದ ಅದನ್ನು ನೇಹಾ ತೆಗೆದುಕೊಂಡು ಆತ್ಮೀಯವಾಗಿ ಆತನನ್ನು ಅಪ್ಪಿಕೊಂಡರು. ಇದೇ ಅವಕಾಶವನ್ನು ಬಳಸಿಕೊಂಡು ಸ್ಪರ್ಧಿ ನೇಹಾರ ಕೆನ್ನೆಗೆ ಕಿಸ್ ಮಾಡಿದ್ದಾರೆ. ಸ್ಪರ್ಧಿ ಮುತ್ತಿಕ್ಕಿದ ಕೂಡಲೇ ನೇಹಾ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ.

ಇನ್ನು ಇದೇ ಕಾರ್ಯಕ್ರಮದ ಮತ್ತೊಬ್ಬ ಸ್ಪರ್ಧಿ ಉತ್ತಮವಾಗಿ ಹಾಡಿದ್ದು ಆತನ ಹಾಡನ್ನು ಕೇಳಿದ ತೀರ್ಪುಗಾರರು ಕಣ್ಣೀರು ಹಾಕಿದ್ದರು. ಸ್ಪರ್ಧಿಯ ಗಾಯನಕ್ಕೆ ಹೃದಯ ಪೂರ್ವಕವಾಗಿ ನೇಹಾ ಕಕ್ಕರ್ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋಗಳು ಇದೀಗ ವೈರಲ್ ಆಗಿದೆ. 

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp