ರಾನು ಮೊಂಡಲ್ ಹಾಡನ್ನು ಅಪಹಾಸ್ಯ ಮಾಡಿದ ಹಾಸ್ಯನಟ; ಆಕ್ರೋಶ, ವಿಡಿಯೋ ವೈರಲ್!

ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಅವರಿಗೆ ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ನಟ ಹಿಮೇಶ್ ರೇಶಮಿಯಾ ಅವರು ಹಾಡೊಂದನ್ನು ಹಾಡಲು ಅವಕಾಶ ನೀಡಿದ್ದರು. ರಾನು ಅವರು ಹಾಡಿದ್ದ ಹಾಡನ್ನು ಹಾಸ್ಯನಟರೊಬ್ಬರು ಅಪಹಾಸ್ಯ ಮಾಡಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ರಾನು-ಹಿಮೇಶ್-ಪಾಪು
ರಾನು-ಹಿಮೇಶ್-ಪಾಪು

ನವದೆಹಲಿ: ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಅವರಿಗೆ ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ನಟ ಹಿಮೇಶ್ ರೇಶಮಿಯಾ ಅವರು ಹಾಡೊಂದನ್ನು ಹಾಡಲು ಅವಕಾಶ ನೀಡಿದ್ದರು. ರಾನು ಅವರು ಹಾಡಿದ್ದ ಹಾಡನ್ನು ಹಾಸ್ಯನಟರೊಬ್ಬರು ಅಪಹಾಸ್ಯ ಮಾಡಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

ಹಿಮೇಶ್ ರೇಶಮಿಯಾ ಅವರು ತೇರಿ ಮೇರಿ ಕಹಾನಿ ಶೀರ್ಷಿಕೆಯ ಹಾಡೊಂದಲ್ಲಿ ರಾನು ಮೊಂಡಲ್ ಹಾಡಿದ್ದರು. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ಹಾಡನ್ನು ಹಾಸ್ಯನಟ ಪಾಪು ಪೊಮ್ ಪೊಮ್ ಎಂಬಾತ ಅಪಹಾಸ್ಯ ಮಾಡಿದ್ದಾರೆ. 

ಪಾಪು ಅಪಹಾಸ್ಯದ ಹಾಡು ಸದ್ಯ ವೈರಲ್ ಆಗಿದ್ದು ಇದಕ್ಕೆ ನೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನಿಸ್ಚಿಂಟಕೋಯಿಲಿ ನಾಗರಿಕಾ ಮಂಚ್ ಪಾಪು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 

ಪಾಪು ಅಪಹಾಸ್ಯದ ವಿಡಿಯೋ ವಿವಾದಕ್ಕೆ ಕಾರಣವಾಗಿದ್ದು ಈ ಬಗ್ಗೆ ಪಾಪು ಮಹಿಳೆಗೆ ಕ್ಷಮೆಯಾಚಿಸಿದ್ದಾರೆ. ನಾನು ಹಾಡನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ವಿಡಿಯೋವನ್ನು ಮಾಡಿದ್ದೇನೆ. ಅದು ಒಬ್ಬ ಕಲಾವಿದನಿಂದ ಇನ್ನೊಬ್ಬ ಕಲಾವಿದನಿಗೆ ಉಡುಗೊರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com