900 ಕಿ. ಮೀ ದೂರ ನಡೆದು ಅಕ್ಷಯ್ ಕುಮಾರ್ ಭೇಟಿ ಮಾಡಿದ ಅಭಿಮಾನಿ! ಹುಚ್ಚು ಅಭಿಮಾನಕ್ಕೆ ಬಾಲಿವುಡ್ ಕಿಲಾಡಿ ಏನಂದ್ರು

ಪ್ರತಿಯೊಬ್ಬ ಅಭಿಮಾನಿಯೂ ತಮ್ಮ ನೆಚ್ಚಿನ ನಟನಿಗೆ ವಿಭಿನ್ನ ರೀತಿಯಲ್ಲಿ  ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸುತ್ತಾರೆ. ಇತ್ತೀಚಿಗೆ ಅಭಿಯಾನಿಯೊಬ್ಬ 900 ಕಿ. ಮೀ. ನಡೆದು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಿರುವ ಘಟನೆ ನಡೆದಿದೆ.

Published: 01st September 2019 07:13 PM  |   Last Updated: 01st September 2019 07:15 PM   |  A+A-


prabhatAkshaykumar

ಪ್ರಭಾತ್, ಅಕ್ಷಯ್ ಕುಮಾರ್

Posted By : Nagaraja AB
Source : Online Desk

ಮುಂಬೈ: ಪ್ರತಿಯೊಬ್ಬ ಅಭಿಮಾನಿಯೂ ತಮ್ಮ ನೆಚ್ಚಿನ ನಟನಿಗೆ ವಿಭಿನ್ನ ರೀತಿಯಲ್ಲಿ  ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸುತ್ತಾರೆ. ಇತ್ತೀಚಿಗೆ ಅಭಿಯಾನಿಯೊಬ್ಬ 900 ಕಿ. ಮೀ. ನಡೆದು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಿರುವ ಘಟನೆ ನಡೆದಿದೆ.

ತಮಾಷೆಯಲ್ಲ, ಈತನ ಹೆಸರು ಪ್ರಭಾತ್ . ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಲೆಂದೆ ದ್ವಾರಕದಿಂದ ಮುಂಬೈಯವರೆಗೂ ನಡೆದು ಬಂದಿದ್ದಾರೆ. ಇದಕ್ಕಾಗಿ 18 ದಿನಗಳನ್ನು ತೆಗೆದುಕೊಂಡಿದ್ದು, ಕೊನೆಗೂ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಅಭಿಮಾನಿಯ ಇಂತಹ ಅಭಿಮಾನದಿಂದ ಪ್ರಭಾವಿತರಾಗಿರುವ ಅಕ್ಷಯ್ ಕುಮಾರ್,  ಆ ಅಭಿಮಾನಿ ಜೊತೆಗಿರುವ ಪೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ದ್ವಾರಕದಿಂದ 900 ಕಿ. ಮೀ. ದೂರ ನಡೆದು ಬಂದಿದ್ದ ಪ್ರಭಾತ್ ನನ್ನು ಇಂದು ಭೇಟಿ ಮಾಡಿದೆ. ನನ್ನನ್ನು ಸಂಪರ್ಕಿಸಲು 18 ದಿನಗಳನ್ನು ತೆಗೆದುಕೊಂಡಿದ್ದಾನೆ. ನಮ್ಮ ಯುವಕರು ತಮ್ಮ ಗುರಿಗಳನ್ನು ಸಾಧಿಸಲು ಈ ರೀತಿಯ ಯೋಜನೆ ಹಾಗೂ ದೃಢ ನಿರ್ಧಾರ ತೆಗೆದುಕೊಂಡರೆ ನಂತರ ನಮ್ಮನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಪ್ರಭಾತ್ ವಿಡಿಯೋವನ್ನು ಅಕ್ಷಯ್ ಕುಮಾರ್ ಕೂಡಾ ಶೇರ್ ಮಾಡಿದ್ದಾರೆ.  ಅಷ್ಟು ದೂರ ನಡೆಯಲು ಕಾರಣವೇನು ಎಂಬುದನ್ನು  ಅಭಿಮಾನಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ನಡಿಗೆಯ ಬಗ್ಗೆ ಸಂದೇಶ ಸಾರಲು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾರೆ. ಎಲ್ಲರೂ ನಡೆಯಬೇಕೆಂದು ಅವರು ಹೇಳಿದ್ದಾರೆ. 

ಅಭಿಯಾನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ಯಾಡ್ ಮನ್, ಇಂತಹ ಹುಚ್ಚು ಅಭಿಮಾನವನ್ನು ತಡೆಗಟ್ಟುವಂತೆ ಇತರ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಎಲ್ಲರ ಪ್ರೀತಿಗೆ ಕೃತಜ್ಞನಾಗಿರುತ್ತೇನೆ ಆದರೆ, ಇಂತಹ ಕೆಲಸ ಮಾಡಬೇಡಿ. ನಿಮ್ಮ ಉತ್ತಮ ಜೀವನಕ್ಕಾಗಿ ಶಕ್ತಿ, ಸಮಯ, ಸಂಪನ್ಮೂಲದ ಕಡೆಗೆ ಗಮನ ನೀಡಿ, ಅದು ನನ್ನಗೆ ಸಂತೋಷವನ್ನುಂಟುಮಾಡುತ್ತದೆ ಎಂದು ಅಕ್ಷಯ್ ಕುಮಾರ್ ಸಲಹೆ ನೀಡಿದ್ದಾರೆ.

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp