ನನ್ನ ಭಾವನೆಗಳಿಗೆ ಮಾತಿರಲಿಲ್ಲ, ನನ್ನ ದೇಹ ಮಾರಾಟದ ಸರಕಾಗಿತ್ತು: ಮಿಯಾ ಖಲೀಫಾ

ನಾನು ನಂಬರ್ 1 ಪೋರ್ನ್ ಸ್ಟಾರ್ ಆಗಿದ್ದೆ. ಆದರೆ ನನ್ನ ವೃತ್ತಿ ಜೀವನದಲ್ಲಿ ನಾನು ಗಳಿಸಿದ್ದು ಕೇವಲ 8.5 ಲಕ್ಷ ಮಾತ್ರ ಎಂದು ಹೇಳಿದ್ದ ಮಿಯಾ ಖಲೀಫಾ ಇದೀಗ ನನ್ನ ಭಾವನೆಗಳಿಗೆ ಮಾತಿರಲಿಲ್ಲ. ನನ್ನ ದೇಹ ಮಾರಾಟದ ಸರಕಾಗಿತ್ತು ಎಂದು ಹೇಳಿದ್ದಾರೆ.

Published: 02nd September 2019 05:44 PM  |   Last Updated: 02nd September 2019 05:44 PM   |  A+A-


Mia Khalifa

ಮಿಯಾ ಖಲೀಫಾ

Posted By : Vishwanath S
Source : Online Desk

ನಾನು ನಂಬರ್ 1 ಪೋರ್ನ್ ಸ್ಟಾರ್ ಆಗಿದ್ದೆ. ಆದರೆ ನನ್ನ ವೃತ್ತಿ ಜೀವನದಲ್ಲಿ ನಾನು ಗಳಿಸಿದ್ದು ಕೇವಲ 8.5 ಲಕ್ಷ ಮಾತ್ರ ಎಂದು ಹೇಳಿದ್ದ ಮಿಯಾ ಖಲೀಫಾ ಇದೀಗ ನನ್ನ ಭಾವನೆಗಳಿಗೆ ಮಾತಿರಲಿಲ್ಲ. ನನ್ನ ದೇಹ ಮಾರಾಟದ ಸರಕಾಗಿತ್ತು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಮಿಯಾ ಖಲೀಫಾ ಅವರು ಪೋರ್ನ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದು ಇದೀಗ ತಮ್ಮ ವೈಯಕ್ತಿಕ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಪೋರ್ನ್ ಚಿತ್ರೋದ್ಯಮದಲ್ಲಿ ಕಡಿಮೆ ಹಣ ಪಾವತಿಸುತ್ತಾರೆ ಎಂದರೇ ಜನ ನಂಬುವುದಿಲ್ಲ. ಅಲ್ಲಿ ಸಿಗುವ ಹಣ ನಮ್ಮ ಬದುಕಿನ ನಿರ್ವಹಣೆಗೆ ಸಾಗುತ್ತದೆ ಅಷ್ಟೇ. ನಾನು ಕೇವಲ ಮೂರು ತಿಂಗಳು ಮಾತ್ರ ಅಶ್ಲೀಲ ಉದ್ಯಮದಲ್ಲಿ ಕೆಲಸ ಮಾಡಿದ್ದೇ ಎಂದು ಹೇಳಿದ್ದಾರೆ. 

ಇನ್ನು ಈ ಕ್ಷೇತ್ರಕ್ಕೆ ನಾನು ಕಾಲಿಟ್ಟಿದ್ದರಿಂದ ನನ್ನ ಕುಟುಂಬದ ಜೊತೆಗೆ ಸುತ್ತಮುತ್ತಲಿನ ಜನರಿಂದ ನಾನು ದೂರವಾಗಬೇಕಾಯಿತು. ಅಲ್ಲಿ ನಾನು ಒಬ್ಬಂಟಿಯಾದೆ. ಆ ಸಂದರ್ಭದಲ್ಲಿ ನಾನು ಮಾಡುತ್ತಿದ್ದದ್ದು ತಪ್ಪಾದರೂ ಅದನ್ನು ಬಿಟ್ಟು ಬರುವಂತಿರಲಿಲ್ಲ. ಆದರೆ ಈಗ ನನ್ನ ತಪ್ಪುಗಳನ್ನು ಅರಿತುಕೊಂಡಿದ್ದೇನೆ. ಆಗಿನ ಗಾಯಗಳು ಈಗ ಮಾಸುತ್ತಿದೆ. ಮನಸು ತಿಳಿಯಾಗುತ್ತಿದೆ ಎಂದಿದ್ದಾರೆ.

ಪುರುಷರು ಮಹಿಳೆಯ ನಗ್ನ ದೇಹವನ್ನು ನೋಡಲು ಬಯಸುತ್ತಾರೆ. ಅದೇ ರೀತಿ ನಾನು ಗೂಗಲ್ ನಲ್ಲಿ ಸರ್ಚ್ ಮಾಡುವ ವಸ್ತುವಾಗಿದ್ದೆ. ನನ್ನ ಭಾವನೆಗಳಿಗೆ ಮಾತಿರಲಿಲ್ಲ ಎಂದು ಹೇಳಿದ್ದಾರೆ.

Stay up to date on all the latest ಬಾಲಿವುಡ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp