ಗಣೇಶ ವಿಸರ್ಜನೆ ವೇಳೆ ಶಿಲ್ಪಾಶೆಟ್ಟಿ ಬಿಂದಾಸ್ ಸ್ಟೆಪ್ ! ವಿಡಿಯೋ

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ದಂಪತಿ ಪ್ರತಿವರ್ಷವೂ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸುತ್ತಾರೆ.

Published: 05th September 2019 12:26 AM  |   Last Updated: 05th September 2019 12:29 AM   |  A+A-


shilpashetty

ಶಿಲ್ಪಾಶೆಟ್ಟಿ ದಂಪತಿ

Posted By : Nagaraja AB
Source : Online Desk

ಮುಂಬೈ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ದಂಪತಿ ಪ್ರತಿವರ್ಷವೂ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸುತ್ತಾರೆ.

ಗಣೇಶ ಚತುರ್ಥಿ  ಹಿನ್ನೆಲೆಯಲ್ಲಿ ಈ ಬಾರಿಯೂ ತಮ್ಮ ಮನೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಶಿಲ್ಪಾಶೆಟ್ಟಿ ಕುಟುಂಬ ನಿನ್ನೆ ವಿಸರ್ಜನೆ ಮಾಡಿದ್ದಾರೆ.

ಈ ವೇಳೆ  ಶಿಲ್ಪಾಶೆಟ್ಟಿ ತಮ್ಮ ಕುಟುಂಬ ಸದಸ್ಯರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ನಂತರ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗಿದೆ. ಈ ವಿಡಿಯೋವನ್ನು ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp