ಸಲ್ಲು, ಸಾಲೆಯಿಂದ ಭಾಯ್ ಎಂದು ಕರೆಸಿಕೊಳ್ಳಲು ನನಗೆ 30 ವರ್ಷ ಹಿಡಿಯಿತು: ಸಲ್ಮಾನ್ ಖಾನ್ 

ಅಂತಾರಾಷ್ಟ್ರೀಯ ಭಾರತ ಚಲನಚಿತ್ರ ಅಕಾಡೆಮಿ(ಐಐಎಫ್ಎ)ಯ 20ನೇ ಆವೃತ್ತಿ ಮುಂಬೈಯಲ್ಲಿ ಇದೇ ತಿಂಗಳು 16ರಿಂದ 18ರವರೆಗೆ ನಡೆಯಲಿದೆ.

Published: 06th September 2019 01:33 PM  |   Last Updated: 06th September 2019 01:44 PM   |  A+A-


Salman Khan

ಸಲ್ಮಾನ್ ಖಾನ್

Posted By : Sumana Upadhyaya
Source : PTI

ಮುಂಬೈ: ಅಂತಾರಾಷ್ಟ್ರೀಯ ಭಾರತ ಚಲನಚಿತ್ರ ಅಕಾಡೆಮಿ(ಐಐಎಫ್ಎ)ಯ 20ನೇ ಆವೃತ್ತಿ ಮುಂಬೈಯಲ್ಲಿ ಇದೇ ತಿಂಗಳು 16ರಿಂದ 18ರವರೆಗೆ ನಡೆಯಲಿದೆ. ಇದರ ಪೂರ್ವಭಾವಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ಮತ್ತು ಕತ್ರಿನಾ ಕೈಫ್ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, 1989ರಲ್ಲಿ ತಾನು ನಟಿಸಿದ ಮೈನೆ ಪ್ಯಾರ್ ಕಿಯಾ ಚಿತ್ರ ಹಿಟ್ ಆದ ನಂತರ ಜನರ ಮನಸ್ಸಲ್ಲಿ ಗುರುತಿಸಿ ಸ್ಥಾನ ಪಡೆದುಕೊಂಡೆ. ಅದನ್ನು ಇಂದಿನವರೆಗೆ ಉಳಿಸಿಕೊಂಡಿದ್ದೇನೆ ಎಂದರು.


ಜನರ, ಅಭಿಮಾನಿಗಳ ಪ್ರೀತಿ, ವಿಶ್ವಾಸಗಳಿಂದ ಸುಮಾರು 30 ವರ್ಷಗಳಿಂದ ಚಲನಚಿತ್ರೋದ್ಯಮದಲ್ಲಿದ್ದೇನೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ನೀಡಲು ಈಗಲೂ ಕಠಿಣ ಶ್ರಮ ಹಾಕಿ ಕೆಲಸ ಮಾಡುತ್ತೇನೆ ಎಂದರು.


ಸಲ್ಲು, ಸಾಲೆಯಿಂದ ಹಿಡಿದು ಇಂದು ಭಾಯಿ, ಭಾಯಿಜನ್ ಎಂದು ಅಭಿಮಾನಿಗಳು ನನ್ನನ್ನು ಕರೆಯುತ್ತಾರೆ. ಅದನ್ನು ಸಂಪಾದಿಸಲು ನನಗೆ ಇಷ್ಟು ವರ್ಷ ಹಿಡಿಯಿತು ಎಂದರು.


ಐಐಎಫ್ ಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ದಂಡೇ ಸೇರಲಿದೆ. ಅದನ್ನು ಅರ್ಜುನ್ ಕಪೂರ್ ಮತ್ತು ಆಯುಷ್ಮಾನ್ ಖುರಾನ್ ನಡೆಸಿಕೊಡಲಿದ್ದಾರೆ. 

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp