ಚಂದ್ರಯಾನ-2: ಇಸ್ರೋ ವಿಜ್ಞಾನಿಗಳ ಪ್ರಯತ್ನಕ್ಕೆ ಬಾಲಿವುಡ್‌ ಸಲಾಂ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) 'ಚಂದ್ರಯಾನ- 2' ಯೋಜನೆ ಚಂದ್ರನ ಮೇಲೆ ಇಳಿಯುವ ತನ್ನ ಪ್ರಯತ್ನದ ಕೊನೆಯ ಕ್ಷಣಗಳಲ್ಲಿ ವಿಫಲವಾಗಿದ್ದರೂ, ಬಾಲಿವುಡ್ ಕಲಾವಿದರು...

Published: 07th September 2019 07:23 PM  |   Last Updated: 07th September 2019 07:23 PM   |  A+A-


chandra-2

ಚಂದ್ರಯಾನ 2

Posted By : Lingaraj Badiger
Source : UNI

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) 'ಚಂದ್ರಯಾನ- 2' ಯೋಜನೆ ಚಂದ್ರನ ಮೇಲೆ ಇಳಿಯುವ ತನ್ನ ಪ್ರಯತ್ನದ ಕೊನೆಯ ಕ್ಷಣಗಳಲ್ಲಿ ವಿಫಲವಾಗಿದ್ದರೂ, ಬಾಲಿವುಡ್ ಕಲಾವಿದರು ಇಸ್ರೋ ವಿಜ್ಞಾನಿಗಳ ಪ್ರಯತ್ನ ಹಾಗೂ ಅವರ ಅತ್ಯುತ್ತಮ ಕಾರ್ಯವನ್ನು ಶ್ಲಾಘಿಸಿದ್ದಾರೆ.

ನಟ ಶಾರುಖ್ ಖಾನ್ ಟ್ವೀಟ್ ಮಾಡಿ, "ನಾವು ಅನೇಕ ಬಾರಿ ನಮ್ಮ ಗಮ್ಯಸ್ಥಾನವನ್ನು ತಲುಪಲು ಬಯಸುತ್ತೇವೆ. ಆದರೆ, ತಲುಪಲು ಸಾಧ್ಯವಾಗುವುದಿಲ್ಲ. ಅತ್ಯಂತ ಮುಖ್ಯವಾದ ವಿಷಯವೆಂದರೆ ನಾವು ಗುರಿಯನ್ನು ಸಾಧಿಸಲು ಹೊರಟಿದ್ದೇವೆ. ಹೀಗಾಗಿ ಸಾಧ್ಯವಾದಷ್ಟು ವಿಶ್ವಾಸವಿಡುವ ಅಗತ್ಯವಿದೆ. ನಮ್ಮ ವರ್ತಮಾನ ಯಾವತ್ತು ನಮ್ಮ ಗುರಿಯಲ್ಲ. ಸೂಕ್ತ ಸಮಯ ಮತ್ತು ಆತ್ಮವಿಶ್ವಾಸದ ಆಧಾರದ ಮೇಲೆ ಗುರಿ ಮುಟ್ಟಲು ಸಾಧ್ಯ. ಇಸ್ರೋ ಕುರಿತು ಹೆಮ್ಮೆ ಇದೆ'' ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, "ಇಂದು ಹೊಸ ಸೂರ್ಯ ಉದಯಿಸಿದ್ದಾನೆ. ಮತ್ತೊಮ್ಮೆ ಚಂದ್ರನನ್ನು ನಾವು ಸೆರೆಹಿಡಿಯುತ್ತೇವೆ. ಗೌರವ ಎಂದಿಗೂ ಸೋಲು ಅನುಭವಿಸುವದಿಲ್ಲ. 'ಇಸ್ರೋ ನಮ್ಮ ಹೆಮ್ಮೆ, ನಮ್ಮ ಗೆಲುವು'' ಎಂದು ಟ್ವೀಟ್ ಮಾಡಿದ್ದಾರೆ.

"ಇಸ್ರೋ ಇಂದು ಮಾಡಿರುವ ಸಾಧನೆ ಸಣ್ಣ ಮಟ್ಟದಲ್ಲ. ಇದರ ಬಗ್ಗೆ ನಮಗೆ ಹೆಮ್ಮೆಯಿದೆ. " ಎಂದು ಬಾಲಿವುಡ್ ನಟ ರಿತೇಶ್ ದೇಶಮುಖ್ ಟ್ವೀಟ್ ಮಾಡಿದ್ದಾರೆ.

"ಭಾರತ ಮತ್ತು ಇಡೀ ವಿಶ್ವ ನಿಮ್ಮ ಜೊತೆಗಿದೆ " ಎಂದು ನಟ ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.

ನಟ ಅಕ್ಷಯ್‌ ಕುಮಾರ್, ನಿರ್ದೇಶಕ ಮಧುರ್ ಬಂಡಾರ್ಕರ್, ಗಾಯಕ ಅರ್ಮನ್ ಮಲ್ಲಿಕ್ ಸೇರಿದಂತೆ ಅನೇಕರು ಚಂದ್ರಯಾನ 2ರ ಬಗ್ಗೆ ಕುತೂಹಲಕಾರಿಯಾಗಿದ್ದೇವೆಂದು ಟ್ವೀಟ್ ಮಾಡಿದ್ದರು.

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp