ನ್ಯೂಯಾರ್ಕ್ ವಿವಿಯಲ್ಲಿ ಸುಹಾನಾ: ಶಾರುಖ್ ಪುತ್ರಿಯ ಹಾಟ್ ಫೋಟೋ ಟ್ರೋಲ್

ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಮೂರು ಮಕ್ಕಳ ತಂದೆ. ಅವರ ಒಬ್ಬಳೇ ಮಗಳಾದ ಸುಹಾನಾ ಸದ್ಯ ಪದವಿ ಮುಗಿಸಿ, ಈಗ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ನ್ಯೂಯಾರ್ಕ್​ನ ವಿಶ್ವವಿದ್ಯಾಲಯಕ್ಕೆ ಈಗಷ್ಟೆ ಎಂಟ್ರಿ ಕೊಟ್ಟಿದ್ದಾರೆ.

Published: 07th September 2019 09:46 AM  |   Last Updated: 07th September 2019 09:46 AM   |  A+A-


suhana khan

ಸುಹಾನಾ ಖಾನ್

Posted By : Shilpa D
Source : Online Desk

ಮುಂಬಯಿ:  ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಮೂರು ಮಕ್ಕಳ ತಂದೆ. ಅವರ ಒಬ್ಬಳೇ ಮಗಳಾದ ಸುಹಾನಾ ಸದ್ಯ ಪದವಿ ಮುಗಿಸಿ, ಈಗ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ನ್ಯೂಯಾರ್ಕ್​ನ ವಿಶ್ವವಿದ್ಯಾಲಯಕ್ಕೆ ಈಗಷ್ಟೆ ಎಂಟ್ರಿ ಕೊಟ್ಟಿದ್ದಾರೆ.

 ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಫೋಟೋಗಳಿಂದಲೇ ಸದ್ದು ಮಾಡುವ ಸುಹಾನಾ, ಈಗ ಮತ್ತೆ ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ ಸುಹಾನಾ ಖಾನ್​, ಹಿಂದೆಯೂ ಸಾಕಷ್ಟು ಸಲ ಸುಹಾನಾ ಕೇವಲ ತಮ್ಮ ಫೋಟೋಗಳಿಂದಲೇ ಸದ್ದು ಮಾಡಿದ್ದರು. ಈಗಲೂ ಸಹ ಅವರು ನ್ಯೂಯಾರ್ಕ್​ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿದ್ದು, ಅಲ್ಲಿನ ಕ್ಯಾಂಪಸ್​ನಲ್ಲಿ ಸುಹಾನಾ ಇರುವ ಒಂದು ಚಿತ್ರ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ಅದು ಈಗ ವೈರಲ್​ ಆಗುತ್ತಿದೆ.

ಮಾಡರ್ನ್​ ಬಟ್ಟೆ ತೊಟ್ಟಿರುವ ಸುಹಾನಾಸಿಕ್ಕಾಪಟ್ಟೆ ಹಾಟ್​ ಆಗಿ ಕಾಣಿಸುತ್ತಿದ್ದಾರೆ. ಅವರು ಒಂದು ಕೈಯಲ್ಲಿ ಕಾಫಿ ಮಗ್​, ಮತ್ತೊಂದು ಕೈಯಲ್ಲಿ ಫೈಲ್ ಹಿಡಿದು ಬೆಂಚ್​ ಮೇಲೆ ಕೂರಲು ಹೋಗುವಾಗ ಈ ಚಿತ್ರ ತೆಗೆಯಲಾಗಿದ್ದು, ಅದರಲ್ಲಿ ಸುಹಾನಾ ಕ್ಯೂಟ್​ ಸ್ಮೈಲ್​ ಸಹ ಕೊಟ್ಟಿದ್ದಾರೆ.

ಇದಕ್ಕೆ ಹಲವರು ಹಲವು ರೀತಿಯ ಕಮೆಂಟ್ ಮಾಡಿದ್ದಾರೆ, ಅವರಿಗೆ ಬಟ್ಟೆಗಳ ಆಯ್ಕೆ ಕುರಿತಂತೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದಾರೆ. ಏನನ್ನು ಮುಚ್ಚಿಟ್ಟುಕೊಳ್ಳಬೇಕು ಎಂಬದನ್ನು ಕಲಿಯಿರಿ, ನೀವು ಶಾರುಖ್ ಪುತ್ರಿ ನಿಮಗೆ ಸಾಕಷ್ಟು ಫೇಮಸ್ ಆಗುವ ಅವಶ್ಯಕತೆಯಿಲ್ಲ,  ಅರ್ದ ಬಟ್ಟೆ ಧರಿಸುವುದು ಸರಿಯಲ್ಲ  ಎಂದು ಕಮೆಂಟ್ ಮಾಡಿದ್ದಾರೆ.

facebook twitter whatsapp