ಅಜ್ಜಿಯಾಗುವ ಸಂಭ್ರಮದಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್!

ಬಾಲಿವುಡ್ ನಟಿ ರವೀನಾ ಟಂಡನ್ ಅಜ್ಜಿಯಾಗುವ ಸಂಭ್ರಮದಲ್ಲಿದ್ದಾರೆ. ರವೀನಾ ತನ್ನ ದತ್ತು ಮಗಳು ಛಾಯಾ ಅವರ ಸೀಮಂತದ ಕಾರ್ಯಕ್ರಮದ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ತಾನು ಆದಷ್ಟು ಶೀಘ್ರ ಅಜ್ಜಿಯಾಗುವುದಾಗಿ ಖುಷಿ ಹಂಚಿಕೊಂಡಿದ್ದಾರೆ.

Published: 09th September 2019 03:59 PM  |   Last Updated: 09th September 2019 03:59 PM   |  A+A-

ಅಜ್ಜಿಯಾಗುವ ಸಂಭ್ರಮದಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್!

Posted By : Raghavendra Adiga
Source : Online Desk

ಬಾಲಿವುಡ್ ನಟಿ ರವೀನಾ ಟಂಡನ್ ಅಜ್ಜಿಯಾಗುವ ಸಂಭ್ರಮದಲ್ಲಿದ್ದಾರೆ. ರವೀನಾ ತನ್ನ ದತ್ತು ಮಗಳು ಛಾಯಾ ಅವರ ಸೀಮಂತದ ಕಾರ್ಯಕ್ರಮದ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ತಾನು ಆದಷ್ಟು ಶೀಘ್ರ ಅಜ್ಜಿಯಾಗುವುದಾಗಿ ಖುಷಿ ಹಂಚಿಕೊಂಡಿದ್ದಾರೆ.

 "ನಾನು ಮತ್ತು ನನ್ನ ಸಂಸಾರ! ನನ್ನ ಮಗುವಿನ ಮಗುವಿಗೆ ಕೌಂಟ್ಡೌನ್ ಪ್ರಾರಂಭವಾಗಿದೆ" ಎಂದು ರವೀನಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.ಜತೆಗೆ ಛಾಯಾ ಅವರ ಸೀಮಂತದ ಅನೇಕ ಚಿತ್ರಗಳನ್ನು ಸಹ ಹಾಕಿಕೊಂಡಿದ್ದಾರೆ. 

ಛಾಯಾ ಅವರು  2016 ರಲ್ಲಿ ಗೋವಾದಲ್ಲಿ ನಡೆದ ಹಿಂದೂ-ಕ್ಯಾಥೊಲಿಕ್ ಸಮಾರಂಭವೊಂದರಲ್ಲಿ ಶಾನ್ ಮೆಂಡಿಸ್ ಅವರನ್ನು ವಿವಹವಾಗಿದ್ದರು. ಇದೀಗ ಕಳೆದ ವಾರಾಂತ್ಯದಲ್ಲಿ ರವೀನಾ ಕುಟುಂಬ ದತ್ತು ಮಗಳ ಸೀಮಂತವನ್ನು ಅದ್ದೂರಿಯಾಗಿ ನೆರವೇರಿಸಿದೆ.

ರವೀನಾ ಅವರು 1995 ರಲ್ಲಿ ಪೂಜಾ ಮತ್ತು ಛಾಯಾ ಅವರುಗಳನ್ನು ಒಂದೇ ಬಾರಿಗೆ ದತ್ತು ಪಡೆದಿದ್ದರು. ಅದಾಗ ಇಬ್ಬರಿಗೆ ಕ್ರಮವಾಗಿ 11 ವರ್ಷ ಮತ್ತು 8 ವರ್ಷವಯಸ್ಸಾಗಿತ್ತು.

ತೊಂಬತ್ತರ ದಶಕದ ಬಾಲಿವುಡ್ ಅಗ್ರ ನಟಿಯರಲ್ಲಿ ಒಬ್ಬರಾಗಿದ್ದ ರವೀನಾ ಟಂಡನ್ ಸಲ್ಮಾನ್ ಖಾನ್ ಅವರೊಂದಿಗೆ ಪತ್ತರ್ ಕೆ ಫೂಲ್, , ಅಜಯ್ ದೇವ್‌ಗನ್ ಎದುರು ದಿಲ್ವಾಲೆ, ಅನಿಲ್ ಕಪೂರ್ ಅವರೊಂದಿಗೆ ಲಾಡ್ಲಾ ಸೇರಿ ಅಕ್ಷಯ್ ಕುಮಾರ್, ಸನ್ನಿ ಡಿಯೋಲ್, ಗೋವಿಂದ ಅವರುಗಳೊಡನೆ ಸಹ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲ್ದೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹಿಟ್ ಚಿತ್ರ "ಉಪೇಂದ್ರ" ದಲ್ಲಿ ಸಹ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.

facebook twitter whatsapp