ಪ್ಲಾಸ್ಟಿಕ್ ಮುಕ್ತ ಭಾರತ: ಬಾಲಿವುಡ್ ಉಪಕ್ರಮಕ್ಕೆ ಪ್ರಧಾನಿ ಮೋದಿ ಹರ್ಷ

ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಕೂಲಿ ನಂ.1 ಚಿತ್ರದ ಉಪಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಶ್ಲಾಘಿಸಿದ್ದಾರೆ.
ಪ್ಲಾಸ್ಟಿಕ್ ಎಸೆದ ಕೂಲಿ ನಂಬರ್ ಚಿತ್ರ ತಂಡ
ಪ್ಲಾಸ್ಟಿಕ್ ಎಸೆದ ಕೂಲಿ ನಂಬರ್ ಚಿತ್ರ ತಂಡ

ನವದೆಹಲಿ: ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಕೂಲಿ ನಂ.1 ಚಿತ್ರದ ಉಪಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಶ್ಲಾಘಿಸಿದ್ದಾರೆ.

ಒಮ್ಮೆ ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್‌ನಿಂದ ದೇಶವನ್ನು ಮುಕ್ತಗೊಳಿಸಲು ಚಲನಚಿತ್ರ ಜಗತ್ತಿಗೆ ನೀಡಿದ ಕೊಡುಗೆಯ ಬಗ್ಗೆ ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ.  ಪ್ರಸ್ತುತ ಕೂಲಿ ನಂಬರ್ ಚಿತ್ರದಲ್ಲಿ ತೊಡಗಿಸಿಕೊಂಡಿರುವ ನಟ ವರುಣ್ ಧವನ್, ತಮ್ಮ ಕಚೇರಿ ಸಿಬ್ಬಂದಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದು ಬಿಸಾಡುತ್ತಿರುವ ಕುರಿತ ಫೋಟೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಅಲ್ಲದೆ ಇದೇ ಕಾರ್ಯವನ್ನು ಎಲ್ಲರೂ ಮಾಡುವಂತಾಗಲಿ ಎಂದು  ಹೇಳಿದ್ದರು. ಅಲ್ಲದೆ ಈ ಹಿಂದೆ ಇದೇ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಸ್ವತಂತ್ರ್ಯ ದಿನಾಚರಣೆ ಭಾಷಣದಲ್ಲಿ ಮಾತನಾಡಿದ್ದರು. ಪ್ಲಾಸ್ಟಿಕ್ ಮುಕ್ತ ಭಾರತದ ತಮ್ಮ ಕನಸನ್ನು ದೇಶದ ಪ್ರಜೆಗಳ ಮುಂದೆ ತೋಡಿಕೊಂಡಿದ್ದರು.

ಇದೇ ವಿಚಾರವಾಗಿ ವರುಣ್ ಧವನ್ ಮತ್ತು ಅವರ ತಂಡ ಮಾಡಿರುವ ಕೆಲಸಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಚಿತ್ರತಂಡದ ಕೆಲಸ ಶ್ಲಾಘನೀಯ. ಪ್ಲಾಸ್ಟಿಕ್ ಮುಕ್ತ ಭಾರತದ ಕನಸಿಗೆ ಬಾಲಿವುಡ್ ಸಾಥ್ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ. ಇದಕ್ಕೆ ವರುಣ್ ಧವನ್ ಕೂಡ ಪ್ರತಿಕ್ರಿಯೆ ನೀಡಿದ್ದು ಧನ್ಯವಾದಗಳು ಪ್ರಧಾನಿಗಳೇ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com