ತಮ್ಮ ಹಿಂಭಾಗ ಮುಟ್ಟಿದ್ದ ಬೋನಿ ಕಪೂರ್ ವಿಡಿಯೋ ವೈರಲ್, ಜಾಲತಾಣಗಳ ವಿರುದ್ಧ 'ಐರಾವತ'ನ ಬೆಡಗಿ ಊರ್ವಶಿ ಗರಂ, ವಿಡಿಯೋ!

ಮದುವೆ ಸಮಾರಂಭದ ವೇಳೆ ಬಾಲಿವುಡ್ ನ ಹಿರಿಯ ನಿರ್ಮಾಪಕ ಬೋನಿ ಕಪೂರ್ ತಮ್ಮ ಹಿಂಭಾಗ ಮುಟ್ಟಿದ್ದರು. ಈ ವಿಡಿಯೋ ವೈರಲ್ ಮಾಡಿದ್ದ ಸಾಮಾಜಿಕ ಜಾಲತಾಣಗಳ ವಿರುದ್ಧ ಐದು ತಿಂಗಳ ಬಳಿಕ ಇದೀಗ ಐರಾವತ ಬೆಡಗಿ ಊರ್ವಶಿ ರೌಟೇಲಾ ಗರಂ ಆಗಿದ್ದಾರೆ.

Published: 24th September 2019 04:33 PM  |   Last Updated: 24th September 2019 07:25 PM   |  A+A-


Boney Kapoor-Urvashi Rautela

ಬೋನಿ ಕಪೂರ್-ಊರ್ವಶಿ ರೌಟೇಲಾ

Posted By : Vishwanath S
Source : Online Desk

ಮುಂಬೈ: ಮದುವೆ ಸಮಾರಂಭದ ವೇಳೆ ಬಾಲಿವುಡ್ ನ ಹಿರಿಯ ನಿರ್ಮಾಪಕ ಬೋನಿ ಕಪೂರ್ ತಮ್ಮ ಹಿಂಭಾಗ ಮುಟ್ಟಿದ್ದರು. ಈ ವಿಡಿಯೋ ವೈರಲ್ ಮಾಡಿದ್ದ ಸಾಮಾಜಿಕ ಜಾಲತಾಣಗಳ ವಿರುದ್ಧ ಐದು ತಿಂಗಳ ಬಳಿಕ ಇದೀಗ ಐರಾವತ ಬೆಡಗಿ ಊರ್ವಶಿ ರೌಟೇಲಾ ಗರಂ ಆಗಿದ್ದಾರೆ.

100%

ಕಳೆದ ಏಪ್ರಿಲ್ ನಲ್ಲಿ ಮದುವೆ ಸಮಾರಂಭಕ್ಕೆ ಬಾಲಿವುಡ್ ಗಣ್ಯರು ಆಗಮಿಸಿದ್ದರು. ಈ ವೇಳೆ ಫೋಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ಬೋನಿ ಕಪೂರ್ ಅವರು ಊರ್ವಶಿ ರೌಟೇಲಾ ಅವರ ಹಿಂಭಾಗವನ್ನು ಮುಟ್ಟಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಆದರೆ ಅಂದು ಇದಕ್ಕೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಐದು ತಿಂಗಳ ಬಳಿಕ ಇದೀಗ ಬೇಸರ ವ್ಯಕ್ತಪಡಿಸಿದ್ದಾರೆ.

100%

ಮದುವೆ ಕಾರ್ಯಕ್ರಮವ ವೇಳೆ ಬೋನಿ ಕಪೂರ್ ಅವರ ಕೈ ನನ್ನ ಹಿಂಭಾಗಕ್ಕೆ ಟಚ್ ಆಗಿತ್ತು. ಇದಕ್ಕೆ ನಾನು ಬೇರೆ ಅರ್ಥ ಕಲ್ಪಿಸಿರಲಿಲ್ಲ. ಆದರೆ ಬೆಳಗಾಗುವಷ್ಟರಲ್ಲಿ ವಿಡಿಯೋ ವೈರಲ್ ಆಗಿತ್ತು. ಇದರಿಂದ ನನಗೆ ತುಂಬಾ ಮುಜುಗರವಾಗಿತ್ತು. ಸತತ ಒಂದು ವಾರ ಇದೇ ವಿಚಾರವಾಗಿ ಪತ್ರಿಕೆ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು.

100%

ಈ ವಿಚಾರವಾಗಿ ನಾನು ಬೋನಿ ಕಪೂರ್ ಅವರನ್ನು ವಿಚಾರಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ, ವಿಡಿಯೋವನ್ನು ಕೆಟ್ಟದಾಗಿ ಬಿಂಬಿಸಿದವರ ವಿರುದ್ಧ ಬೇಸರ ಹೊರಹಾಕಿದ್ದರು. ಬೋನಿ ಅವರ ಮೇಲೆ ನನಗೆ ಅಪಾರ ಗೌರವವಿದೆ. ಆದರೆ ಸಾಮಾಜಿಕ ಜಾಲತಾಣಗಳು ಮಾತ್ರ ಈ ವಿಡಿಯೋವನ್ನು ವೈರಲ್ ಮಾಡಿದ್ದಕ್ಕೆ ಊರ್ವಶಿ ಗರಂ ಆಗಿದ್ದಾರೆ.

Stay up to date on all the latest ಬಾಲಿವುಡ್ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp