ಸಜಿದ್ ಆರೋಪ ಮುಕ್ತರಾದರೆ ಅವರೊಟ್ಟಿಗೆ ಮತ್ತೆ ಸಿನಿಮಾ-ಅಕ್ಷಯ್ ಕುಮಾರ್

ಲೈಂಗಿಕ ಕಿರುಕುಳ ಆರೋಪದಿಂದ ಮುಕ್ತರಾದರೆ ನಿರ್ದೇಶಕ ಸಜಿದ್ ಖಾನ್ ಜೊತೆಗೆ ಮತ್ತೆ ಸಿನಿಮಾ ಮಾಡುವುದಾಗಿ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದಾರೆ.
ಅಕ್ಷಯ್ ಕುಮಾರ್, ಸಜಿದ್ ಖಾನ್
ಅಕ್ಷಯ್ ಕುಮಾರ್, ಸಜಿದ್ ಖಾನ್

ಮುಂಬೈ: ಲೈಂಗಿಕ ಕಿರುಕುಳ ಆರೋಪದಿಂದ ಮುಕ್ತರಾದರೆ ನಿರ್ದೇಶಕ ಸಜಿದ್ ಖಾನ್ ಜೊತೆಗೆ ಮತ್ತೆ ಸಿನಿಮಾ ಮಾಡುವುದಾಗಿ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಜಿದ್ ಕಾನ್ ವಿರುದ್ಧ ಸಲೋನಿ ಚೋಪ್ರಾ ಸೇರಿದಂತೆ ಮೂವರು ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಅವರನ್ನು ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ನಂತರ  ಫರ್ಹಾದ್ ಸಂಜಿ ಈ ಚಿತ್ರವನ್ನು ಪೂರ್ಣಗೊಳಿಸಿದ್ದು, ಟ್ರೈಲರ್ ಇಂದು ಬಿಡುಗಡೆಯಾಗಿದೆ. 

ಹೌಸ್ ಪುಲ್ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್, ಸಜಿದ್ ಖಾನ್ ನಿರ್ದೇಶನ ಮಾಡದಂತೆ 
ಪ್ರೊಡಕ್ಷನ್ ಬ್ಯಾನರ್ ನಾಡಿಯಾಡ್ವಾಲಾ ಮೊಮ್ಮಗ ಅವರ ನಿರ್ಧಾರವಾಗಿತ್ತು ಎಂದರು. 

 ಸಜಿದ್ ಶೇಕಡ 60 ರಷ್ಟು ಸಿನಿಮಾ ಕೆಲಸವನ್ನು ಪೂರ್ಣಗೊಳಿಸಿದ್ದರು. ಆದರೆ, ನಂತರ ಅವರನ್ನು ಬದಲಾಯಿಸಲಾಗಿತ್ತು. ಮೀಟೂ ಅಭಿಯಾನದ ನಂತರ ಚಿತ್ರೋದ್ಯಮದಲ್ಲಿ ಹೆಚ್ಚಿನ ಸುರಕ್ಷತೆ ಮೂಡಿದೆ ಎಂದು 51 ವರ್ಷದ ಅಕ್ಷಯ್ ಕುಮಾರ್ ತಿಳಿಸಿದ್ದಾರೆ. 

ಮೀಟೂ ಅಭಿಯಾನದ ನಂತರ ಸಾಕಷ್ಟು ಬದಲಾವಣೆಯಾಗಿದೆ.ಯಾವುದೇ ತಪ್ಪುಗಳಾಗದಂತೆ ಸಿನಿಮಾ ನಿರ್ಮಾಪಕರು ನೋಡಿಕೊಳ್ಳುತ್ತಿದ್ದಾರೆ. ಇದೀಗ ಹೆಚ್ಚಿನ ಸುರಕ್ಷತೆ ಭಾವ ಮೂಡಿದೆ. ಅನುಚಿತ ವರ್ತನೆ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 

ಮತ್ತೆ ಸಜಿದ್ ಖಾನ್ ಜೊತೆಗೆ ಅಭಿನಯಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್ ಕುಮಾರ್, ಸಜಿದ್ ಆರೋಪ ಮುಕ್ತರಾದರೆ ಅವರೊಟ್ಟಿಗೆ ಕೆಲಸ ಮಾಡಲು ಯಾವುದೇ ಅಡ್ಡಿ ಇರುವುದಿಲ್ಲ. ಏನು ನಡೆಯಿತು ಎಂಬುದು ಖಚಿತವಾಗಿ ತಿಳಿದಿಲ್ಲ. ಅವರು ಆರೋಪ ಮುಕ್ತರಾಗಿ ಬಂದರೆ ಖಂಡಿತವಾಗಿ ಅವರೊಟ್ಟಿಗೆ ಕೆಲಸ ಮಾಡುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com