ಸಲ್ಮಾನ್ ಖಾನ್ ಇಲ್ಲದಿದ್ದರೆ ದಬಾಂಗ್ 3 ಚಿತ್ರದಲ್ಲಿ ನಟಿಸುತ್ತಿರಲಿಲ್ಲ: ಸುದೀಪ್ 

ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಯ್ ಎಂದು ಕರೆಸಿಕೊಳ್ಳುವ ಸಲ್ಮಾನ್ ಖಾನ್ ನಂತಹ ಹೀರೋಗೆ ಒಬ್ಬ ಉತ್ತಮ ಖದರ್ ಇರುವ ಖಳನಾಯಕ ಇರಬೇಕು.
ಕಿಚ್ಚ ಸುದೀಪ್-ಸಲ್ಮಾನ್ ಖಾನ್
ಕಿಚ್ಚ ಸುದೀಪ್-ಸಲ್ಮಾನ್ ಖಾನ್

ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಯ್ ಎಂದು ಕರೆಸಿಕೊಳ್ಳುವ ಸಲ್ಮಾನ್ ಖಾನ್ ನಂತಹ ಹೀರೋಗೆ ಒಬ್ಬ ಉತ್ತಮ ಖದರ್ ಇರುವ ಖಳನಾಯಕ ಚಿತ್ರದಲ್ಲಿ ಇರಬೇಕು. ಆಗಲೇ ಚಿತ್ರದಲ್ಲಿ ಹೀರೋ, ಖಳನಾಯಕನ ಎದುರು ಗೆದ್ದಾಗ ಮತ್ತಷ್ಟು ಮೆಚ್ಚುಗೆ ಸಿಗುವುದು. ಬಹುಶಃ ಅದಕ್ಕೇ ಇರಬಹುದು ದಬಾಂಗ್ 3ಗೆ ಆರಡಿ ಕಟೌಟ್ ಕನ್ನಡ ನಟ ಸುದೀಪ್ ರನ್ನು ಆಯ್ಕೆಮಾಡಿದ್ದು. 

 
ಚಿತ್ರದಲ್ಲಿ  ನಟಿಸುವಾಗ, ಫೈಟಿಂಗ್ ಮಾಡುವಾಗ ಸಲ್ಮಾನ್ ಖಾನ್ ರಿಗಿಂತ ದೊಡ್ಡವನಾಗಿ ಕಾಣಿಸಬೇಕಿತ್ತು, ಇಲ್ಲದಿದ್ದರೆ ನಾಯಕ ಮಗುವಿಗೆ ಹೊಡೆದ ಹಾಗೆ ಕಾಣುತ್ತದೆ. ಸಲ್ಮಾನ್ ಖಾನ್ ರ ನಟನೆಯಲ್ಲಿನ ವರ್ಚಸ್ಸಿಗೆ ತಕ್ಕಂತೆ ನಟಿಸಿದ್ದೇನೆ ಎಂಬ ಖುಷಿಯಿದೆ ಎನ್ನುತ್ತಾರೆ ಸುದೀಪ್.ಸಲ್ಮಾನ್ ಖಾನ್ ಅವರಿರದಿದ್ದಿದ್ದರೆ ನಾನು ಈ ಸಿನಿಮಾ ಒಪ್ಪಿಕೊಳ್ಳುತ್ತಿರಲಿಲ್ಲ ಎಂದರು. 


ತೆಲುಗಿನ ಈಗದಲ್ಲಿ ನಾನಿ ಪಾತ್ರ ಸಂಪೂರ್ಣ ವಿಲನ್ ಅಲ್ಲ, ಮುಖ್ಯ ಎದುರಾಳಿ ಪಾತ್ರ, ಅದರಲ್ಲಿ ಯಾರೂ ನನಗೆ ಹೊಡೆದಿರಲಿಲ್ಲ, ದಬಾಂಗ್ 3ಯಲ್ಲಿ ಚಿತ್ರದ ಕೊನೆಗೆ ನಾವಿಬ್ಬರು ಬರಿಮೈಯಲ್ಲಿ ಹೊಡೆದಾಡಿಕೊಳ್ಳುವ ದೃಶ್ಯವಿದೆ. ಪೈಲ್ವಾನ್ ಗೆ ತೂಕ ಕಡಿಮೆ ಮಾಡಿಕೊಂಡಿದ್ದರಿಂದ ಬರಿಎದೆಯಲ್ಲಿ ಹೊಡೆದಾಡಲು ನನಗೆ ಆತ್ಮವಿಶ್ವಾಸವಿರಲಿಲ್ಲ. ಆದರೆ ಪೈಲ್ವಾನ್ ನಲ್ಲಿ ಮಾಡಿದ ವರ್ಕೌಟ್ ಗಳು ನನಗೆ ಆತ್ಮವಿಶ್ವಾಸ ತುಂಬಿದವು ಎಂದರು ಸುದೀಪ್.


ಪೈಲ್ವಾನ್, ದಬಾಂಗ್ ಚಿತ್ರಕ್ಕಾಗಿ ಸುದೀಪ್ ಅವರು ಜಿಮ್ ನಲ್ಲಿ ಸಾಕಷ್ಟು ಬೆವರು ಸುರಿಸಿದ್ದಾರಂತೆ. ತಿನ್ನುವ ಆಹಾರದ ಕಡೆ ಕೂಡ ಸಾಕಷ್ಟು ಗಮನ ಹರಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಕಡಿಮೆ ಆಹಾರ ತಿನ್ನುವುದು, ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯ ಎನ್ನುತ್ತಾರೆ,


ಸಲ್ಮಾನ್ ಖಾನ್ ಅವರಿಗೆ ಹೊಡೆಯುವುದು ಸಮಸ್ಯೆಯಾಗಲಿಲ್ಲ, ಆದರೆ ಎದೆಗೆ ಹೊಡೆಯಲು ನನಗೆ ಮನಸ್ಸಾಗಲಿಲ್ಲ. ಅದು ಹಲವು ಬಾರಿ ಮಾಡಿಸಿದರು, ಅದು ಸ್ವಲ್ಪ ಸಮಸ್ಯೆಯಾಗಿದ್ದು ಬಿಟ್ಟರೆ ದಬಾಂಗ್ 3 ಶೂಟಿಂಗ್ ಸುಗಮವಾಗಿ ಸಾಗಿತು ಎನ್ನುತ್ತಾರೆ.


ದಬಾಂಗ್ 3ಯಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡಿದ್ದಾರೆ. ಹಿಂದಿ ನನ್ನ ಭಾಷೆ ಅಲ್ಲದಿದ್ದರೂ ಅದನ್ನು ಚೆನ್ನಾಗಿ ನಿಭಾಯಿಸಿದೆ ಎಂದು ಖುಷಿಯಿಂದ ಹೇಳುತ್ತಾರೆ. ಸುದೀಪ್ ಈ ಹಿಂದೆ ಹಿಂದಿಯಲ್ಲಿ ಫೂಂಕ್, ರಣ್, ಫೂಂಕ್ 2, ರಕ್ತ ಚರಿತ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com