ಕೊರೋನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ: ಸಲ್ಮಾನ್ ಖಾನ್

ಕೊರೋನಾ ವೈರಸ್ ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.

Published: 06th April 2020 04:51 PM  |   Last Updated: 06th April 2020 04:51 PM   |  A+A-


Salman Khan

ಸಲ್ಮಾನ್ ಖಾನ್

Posted By : Lingaraj Badiger
Source : UNI

ಪುಣೆ: ಕೊರೋನಾ ವೈರಸ್ ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.

ಪ್ರಸ್ತುತ ತಮ್ಮ ಪನ್ವೇಲ್ ತೋಟದ ಮನೆಯಲ್ಲಿರುವ ಸಲ್ಮಾನ್ ಖಾನ್, ಸಹೋದರ ಸೋಹಿಲ್ ಖಾನ್ ಪುತ್ರ ನಿರ್ವಾನ್ ನೊಂದಿಗೆ ಟ್ವೀಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ತೋಟದ ಮನೆಗೆ ತೆರಳಿದ್ದೆವು. ದೇಶಾದ್ಯಂತ ಲಾಕ್ ಡೌನ್ ಘೋಷಣೆಯಿಂದಾಗಿ ಅಲ್ಲಿಯೇ ಉಳಿದುಕೊಂಡಿದ್ದೇವೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ನಮಗೂ ಭಯವಾಗಿದೆ. ಮೂರು ವಾರಗಳಿಂದ ನನ್ನ ಅಪ್ಪನನ್ನು ನೋಡಲು ಸಾಧ್ಯವಾಗಿಲ್ಲ. ನಾವು ಇಲ್ಲಿದ್ದೇವೆ. ಅವರು ಮನೆಯಲ್ಲಿ ಒಬ್ಬರೇ ಇದ್ದಾರೆ ಎಂದು ವಿಡಿಯೋದಲ್ಲಿ ಸಲ್ಮಾನ್ ಖಾನ್ ಹೇಳಿದ್ದಾರೆ.

ಬಾಲಿವುಡ್ ಹಳೆಯ ಜನಪ್ರಿಯ “ಶೋಲೆ” ಚಿತ್ರಕ್ಕೆ ತಮ್ಮ ತಂದೆ ಸಲೀಂ ಹಾಗೂ ಜಾವೆದ್ ಅಖ್ತರ್ ಬರೆದಿದ್ದ ಸಂಭಾಷಣೆಯನ್ನು ಸಲ್ಮಾನ್ ಖಾನ್ ಉಚ್ಚರಿಸಿದ್ದು, “ಜೋ ಡರ್ ಗಯಾ ಸಮ್ ಜೋ ಮರ್ ಗಯಾ” ಸಂಭಾಷಣೆ ನೆನಪಿಗೆ ಬರುತ್ತಿದೆ. ಸಂಭಾಷಣೆ ನಾವಿರುವ ಪರಿಸ್ಥಿತಿಗೆ ಹೊಂದಿಕೆಯಾಗಿದ್ದರೂ, ನಾವು ಭಯಭೀತರಾಗಿದ್ದೇವೆ ಅದನ್ನು ಧೈರ್ಯವಾಗಿ ಒಪ್ಪಿಕೊಳ್ಳುತ್ತೇವೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಅಷ್ಟೊಂದು ಧೈರ್ಯವಾಗಿರಬೇಡಿ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಜೋ ಡರ್ ಗಯಾ ಸಂಜೋ ವೋ ಬಚ್ಚ್ ಗಯಾ( ಭಯಪಡುವವನು ಉಳಿದುಕೊಳ್ಳುತ್ತಾನೆ) ಎಂಬ ಸಂಭಾಷಣೆ ಸಂದರ್ಭಕ್ಕೆ ಸೂಕ್ತ ವಾಗಿದೆ ಎಂದು ೫೪ ವರ್ಷದ ಸಲ್ಮಾನ್ ಖಾನ್ ಹೇಳಿದ್ದಾರೆ.

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp