ಕನಿಕಾ ಕಪೂರ್ ನಂತರ ಮತ್ತೊಬ್ಬ ಬಾಲಿವುಡ್ ನಟಿಗೆ ಕೊರೋನಾ ಸೋಂಕು

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4 ಸಾವಿರ ಗಡಿ ದಾಟಿದೆ. ಇದೀಗ ಬಾಲಿವುಡ್‌ನ ಖ್ಯಾತ ನಟಿಯೊಬ್ಬರಿಗೂ ಕೊರೊನಾ ವೈರಸ್‌ ತಗುಲಿದೆ.

Published: 07th April 2020 01:55 PM  |   Last Updated: 07th April 2020 01:55 PM   |  A+A-


zoa morani

ಜೊಯಾ ಮೊರಾನಿ

Posted By : Shilpa D
Source : PTI

ಮುಂಬಯಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4 ಸಾವಿರ ಗಡಿ ದಾಟಿದೆ. ಇದೀಗ ಬಾಲಿವುಡ್‌ನ ಖ್ಯಾತ ನಟಿಯೊಬ್ಬರಿಗೂ ಕೊರೊನಾ ವೈರಸ್‌ ತಗುಲಿದೆ.

ನಿರ್ಮಾಪಕ ಕರೀಮ್‌ ಮೊರಾನಿ ಪುತ್ರಿಯಾಗಿರುವ ಜೊಯಾ ಮೊರಾನಿ ಈಗ ಕೊರೊನಾ ವೈರಸ್‌ ಗೆ ಗುರಿಯಾಗಿದ್ದಾರೆ. ಅವರ ಸಹೋದರಿ ಶಾಜಾ ಮೊರಾನಿ ಕೂಡ ವೈರಸ್‌ನಿಂದ ಬಳಲುತ್ತಿದ್ದಾರೆ. ಇವರಿಬ್ಬರೂ ಅವಳಿ ಸಹೋದರಿಯರಾಗಿದ್ದು, ಮಾರ್ಚ್‌ನಲ್ಲಿ ಶ್ರೀಲಂಕಾದಿಂದ ಮುಂಬೈಗೆ ಶಾಜಾ ಮರಳಿದಿದ್ದರು. 

ಅವರಲ್ಲಿ ಕೊರೊನಾದ ಯಾವ ಲಕ್ಷಣಗಳು ಕಾಣಿಸದೇ ಇದ್ದರೂ, ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಿ, ಪರೀಕ್ಷೆ ಮಾಡಲಾಗಿತ್ತು. ಅವರ ರಿಪೋರ್ಟ್‌ನಲ್ಲಿ ಕೊರೊನಾ ಪಾಸಿಟಿವ್‌ ಇರುವುದು ಖಚಿತಗೊಂಡಿತ್ತು.

ರಾಜಸ್ಥಾನಕ್ಕೆ ಹೋಗಿದ್ದ ಜೊಯಾಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಧೀರೂಬಾಯಿ ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆ ಮಾಡಲಾಗಿತ್ತು. ಅವರಿಗೂ ಕೊರೊನಾ ಪಾಸಿಟಿವ್ ಇರುವುದು ತಿಳಿದುಬಂದಿದೆ. ಇದೀಗ ಇಡೀ ಕುಟುಂಬದ ಮೇಲೆ ನಿಗಾ ಇಡಲಾಗಿದೆ. 

ಜೊಯಾ ನಿರ್ಮಾಪಕರ ಪುತ್ರಿಯಾಗಿದ್ದರೂ, ಸಹ ನಿರ್ದೇಶಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. 'ಓಂ ಶಾಂತಿ ಓಂ', 'ಹಲ್ಲಾ ಬೋಲ್‌' ಸಿನಿಮಾಗಳಿಗೆ ಸಹ ನಿರ್ದೇಶಕಿಯಾಗಿ ಕನಎಕೆಲಸ ಮಾಡಿದ್ದರು. ನಂತರ 'ಅಲ್‌ವೇಸ್‌ ಕಭೀ ಕಭೀ', 'ಭಾಗ್‌ ಜಾನಿ' ಸೇರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
 

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp