ಪಿಎಂ ಕೇರ್ಸ್ ನಿಧಿಗೆ ಅಕ್ಷಯ್ ಕುಮಾರ್ ೨೫ ಕೋಟಿಗೆ ದೇಣಿಗೆ ನೀಡಿದ್ದು ತಪ್ಪು: ಶತ್ರುಘ್ನ ಸಿನ್ಹಾ ಆಕ್ಷೇಪ

 ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ’ಪಿಎಂ- ಕೇರ್ಸ್’ ನಿಧಿಗೆ ೨೫ ಕೋಟಿರೂ ಭಾರಿ ಮೊತ್ತ ನೀಡಿರುವುದು ದೊಡ್ಡ ತಪ್ಪು ಎಂದು ಬಾಲಿವುಡ್ ಹಿರಿಯ ನಟ, ಕಾಂಗ್ರೆಸ್ ಮುಖಂಡ ಶತ್ರುಘ್ನ ಸಿನ್ಹಾ ಅಸಮಧಾನ ವ್ಯಕ್ತಪಡಿಸಿದ್ದಾರೆ. 
ಅಕ್ಷಯ್ ಕುಮಾರ್ ಮತ್ತು ಶತೃಘ್ನ ಸಿನ್ಹಾ
ಅಕ್ಷಯ್ ಕುಮಾರ್ ಮತ್ತು ಶತೃಘ್ನ ಸಿನ್ಹಾ

ಮುಂಬೈ:  ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ’ಪಿಎಂ- ಕೇರ್ಸ್’ ನಿಧಿಗೆ ೨೫ ಕೋಟಿರೂ ಭಾರಿ ಮೊತ್ತ ನೀಡಿರುವುದು ದೊಡ್ಡ ತಪ್ಪು ಎಂದು ಬಾಲಿವುಡ್ ಹಿರಿಯ ನಟ, ಕಾಂಗ್ರೆಸ್ ಮುಖಂಡ ಶತ್ರುಘ್ನ ಸಿನ್ಹಾ ಅಸಮಧಾನ ವ್ಯಕ್ತಪಡಿಸಿದ್ದಾರೆ. 

ಇಷ್ಟು ದೊಡ್ಡ ಮೊತ್ತ ದೇಣಿಗೆ ನೀಡುವುದೆಂದರೆ ಇತರರನ್ನು ಹೀಯಾಳಿಸಿದಂತೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ, ಅಕ್ಷಯ್ ಕುಮಾರ್ ಪಿ ಎಂ ಕೇರ್ಸ್ ನಿಧಿಗೆ ೨೫ ಕೋಟಿ ರೂ ದೊಡ್ಡ ದೇಣಿಗೆ ನೀಡುವ ಜತೆಗೆ, ಮುಂಬೈ ಮಹಾನಗರ ಪಾಲಿಕೆಗೆ ೩ ಕೋಟಿ ದೇಣಿಗೆ ಪ್ರಕಟಿಸಿ ಸ್ಚಚ್ಚತಾ ಕಾರ್ಮಿಕರಿಗೆ ಅಗತ್ಯವಾಗಿರುವ ವ್ಯಕ್ತಿಗತ ರಕ್ಷಣಾ ಪರಿಕರಗಳು, ತ್ವರಿತ ಟೆಸ್ಟಿಂಗ್ ಕಿಟ್ ಗಳ ಪೂರೈಕೆಗೆ ಈ ಹಣ ನೀಡುವುದಾಗಿ ಪ್ರಕಟಿಸಿದ್ದಾರೆ. ಆದರೆ, ಶತ್ರುಘ್ನ ಸಿನ್ಹಾ ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೇಣಿಗೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಅದನ್ನು ಏಕೆ ಬಹಿರಂಗವಾಗಿ ಹೇಳಿಕೊಳ್ಳಬೇಕು..? ಎಂದು ಸಿನ್ಹಾ ಪ್ರಶ್ನಿಸಿದ್ದಾರೆ. ಭಾರಿ ಪ್ರಮಾಣದ ದೇಣಿಗೆ ನೀಡುವ ಮೂಲಕ ಇತರರನ್ನು ಹೀಯಾಳಿಸದಂತಾಗುತ್ತದೆ ಏಕೆಂದರೆ..ಉಳಿದವರು ಅಕ್ಷಯ್ ನೀಡಿದ ದೇಣಿಗೆಗೆ ಹೋಲಿಸಿಕೊಂಡು.. ತಾವು ನೀಡುತ್ತಿರುವುದು ಅತ್ಯಂತ ಚಿಕ್ಕಮೊತ್ತ ಎಂದು ದೇಣಿಗೆ ನೀಡುವುದನ್ನೇ ನಿಲ್ಲಿಸಿಬಿಡುತ್ತಾರೆ. ವಿಶ್ವದ ಇತರೆಡೆ, ಸೆಲೆಬ್ರಿಟಿಗಳು ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ನೀಡಿ ದೊಡ್ಡದಾಗಿ ಹೇಳಿಕೊಂಡಿಲ್ಲ ಎಂದು ಸಿನ್ಹಾ ವ್ಯಂಗ್ಯವಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com