ನಟ ಸುಶಾಂತ್ ಸಿಂಗ್ ಬೈಪೊಲಾರ್ ಡಿಸಾರ್ಡರ್ ನಿಂದ ಬಳಲುತ್ತಿದ್ದರು: ಮುಂಬೈ ಪೊಲೀಸರು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ವಿಚಾರ ಕಳೆದ ಒಂದುವರೆ ತಿಂಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳುತ್ತಿವೆ.
ಸುಶಾಂತ್ ಸಿಂಗ್ - ಪೊಲೀಸ್ ಆಯುಕ್ತ
ಸುಶಾಂತ್ ಸಿಂಗ್ - ಪೊಲೀಸ್ ಆಯುಕ್ತ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ವಿಚಾರ ಕಳೆದ ಒಂದುವರೆ ತಿಂಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳುತ್ತಿವೆ.

ಈ ಮಧ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಮುಂಬೈ ಪೊಲೀಸರು, ನಟ ಸುಶಾಂತ್ ಸಿಂಗ್ ಅವರು ಬೈಪೊಲಾರ್ ಡಿಸಾರ್ಡರ್(ತೀವ್ರ ತರದ ಖಿನ್ನತೆ)ನಿಂದ ಬಳಲುತ್ತಿದ್ದರು ಮತ್ತು ಅದಕ್ಕೆ ಚಿಕಿತ್ಸೆ ಸಹ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.

ಈ ಸಂಬಂಧ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು, ಸುಶಾಂತ್ ಸಿಂಗ್ ಅವರು ತೀವ್ರ ತರದ ಖಿನ್ನತೆಯಿಂದ ಬಳುತ್ತಿದ್ದರು ಮತ್ತು ಅದಕ್ಕೆ ಔಷಧಿ ಸಹ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಅವರ ಸಾವಿಗೆ ಯಾವ ಸಂದರ್ಭಗಳು ಕಾರಣವಾಯಿತು ಎಂಬುದು ನಮ್ಮ ತನಿಖೆಯ ವಿಷಯವಾಗಿದೆ', ಎಲ್ಲಾ ಆ್ಯಂಗಲ್ ನಿಂದಲೂ ಪ್ರಕರಣದ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಲೀಲಾ ಭನ್ಸಾಲಿ, ಮಹೇಶ್ ಭಟ್, ಕರಣ್ ಜೋಹರ್ ಮತ್ತು ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ 56 ಜನರ ಹೇಳಿಕೆಗಳನ್ನು ಪಡೆಯಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದರಂತೆ. ಅಷ್ಟೇ ಅಲ್ಲ ಅವರ ಮಾಜಿ ಪಿಎ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡ ವಿಚಾರದಲ್ಲಿ ಸುಶಾಂತ್ ಹೆಸರನ್ನು ತಳುಕು ಹಾಕಿದ ಸುದ್ದಿಗಳನ್ನು ಓದಿ ಸುಶಾಂತ್ ಬೇಸರಗೊಂಡಿದ್ದರಂತೆ. ಇನ್ನು, ನೋವಿಲ್ಲದೆ ಸಾಯುವುದು ಹೇಗೆ ಎನ್ನುವ ಬಗ್ಗೆಯೂ ಸುಶಾಂತ್ ಸರ್ಚ್ ಮಾಡಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಕಳೆದ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮುಂಬೈನಲ್ಲಿಯೇ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಜುಲೈ26ರಂದು ಸುಶಾಂತ್ ತಂದೆ ಕೆಕೆ ಸಿಂಗ್ ಅವರು ರಿಯಾ ಚಕ್ರವರ್ತಿ ವಿರುದ್ಧ ಬಿಹಾರದಲ್ಲಿ ದೂರು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com