ಸೋನು ಸೂದ್
ಸೋನು ಸೂದ್

ಜನರಿಗೆ ನೆರವಿನ ಅಗತ್ಯವಿರುವಾಗ ಸ್ಕ್ರಿಪ್ಟ್‌ಗಳನ್ನು ಓದುತ್ತಾ ಕೂರುವುದು ಕಷ್ಟ: ಸೋನು ಸೂದ್

ಲಾಕ್ ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಸಾಮಾಜಿಕ ಕಾರ್ಯ ಅವರಿಗೆ ಹೊಸ ಎತ್ತರ ಹಾಗೂಗೌರವ,  ಖ್ಯಾತಿಯನ್ನು ತಂದು ಕೊಟ್ಟಿದೆ. . ಭಾರತ ಮತ್ತು ವಿದೇಶಗಳಲ್ಲಿ ಸಿಲುಕಿರುವ ವಲಸಿಗರಿಗೆ, ತಮ್ಮ ಮನೆಗಳನ್ನು, ಊರನ್ನು ತಲುಪಲು ನಟ ಸಾಕಷ್ಟು ಸಹಾಯ ನೀಡಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಸಾಮಾಜಿಕ ಕಾರ್ಯ ಅವರಿಗೆ ಹೊಸ ಎತ್ತರ ಹಾಗೂ ಗೌರವ, ಖ್ಯಾತಿಯನ್ನು ತಂದು ಕೊಟ್ಟಿದೆ. ಭಾರತ ಮತ್ತು ವಿದೇಶಗಳಲ್ಲಿ ಸಿಲುಕಿರುವ ವಲಸಿಗರಿಗೆ, ತಮ್ಮ ಮನೆಗಳನ್ನು, ಊರನ್ನು ತಲುಪಲು ನಟ ಸಾಕಷ್ಟು ಸಹಾಯ ನೀಡಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಆಯೋಜಿಸಿರುವ ವೆಬ್‌ನಾರ್‌ಗಳ ಸರಣಿಯಲ್ಲಿ ಹಿರಿಯ ಪತ್ರಕರ್ತೆ ಕಾವೇರಿ ಬಂಜೈ ಅವರೊಂದಿಗೆ ಮಾತುಕತೆ ನಡೆಸಿದ ನಟ ಸೋನು ಸೂದ್ “ಜನರ ಮುಖದಲ್ಲಿ ಮಂದಹಾಸ ಮೂಡಿಸುವುದು ಅತ್ಯಂತ ವಿಶೇಷವಾದ ಆನಂದ ತರುತ್ತದೆ" ಎಂದಿದ್ದಾರೆ.

ಯಾವುದೇ ಬ್ಲಾಕ್ ಬಸ್ಟರ್ ಚಿತ್ರವೂ ನನಗೆ ಇಷ್ಟು ಆನಂದವನ್ನು ನೀಡುವುದಿಲ್ಲ ಎಂದು ನಟ ಹೇಳಿಕೊಂಡಿದ್ದಾರೆ. ಇದೇ ವೇಳೆ ದೂರದ ಮುಂಬೈನಲ್ಲಿ ಸಿಲುಕಿದ್ದ ಕನ್ನಡಿಗರನ್ನು ಅವರ ಮನೆಗೆ ತಲುಪಿಸುವುದರೊಡನೆ ನಟ ಸೋನು ಸೂದ್ ಈ ಸಮಾಜ ಸೇವಾ ಕಾರ್ಯಕ್ಕೆ ಚಾಲನೆ ನೀಡಿದ್ದರು.ಅವರು ಅವರಿಗೆ ಅಗತ್ಯವಾದ  ಪ್ರಯಾಣದ ದಾಖಲೆ ಪಾಸ್ ಗಳ ಸಂಗ್ರಹಿಸಿ ನೀಡಿ ಅವರು ತಮ್ಮ ಊರು, ಮನೆಗಳಿಗೆ ತಲುಪಲು ನೆರವಾಗಿದ್ದರು. ಮನೆಗೆ ಹಿಂದಿರುಗುವ ಮಾರ್ಗದ ನಡುವೆ ರಸ್ತೆ, ಸೇತುವೆಯಡಿಯಲ್ಲಿ ಆಶ್ರಯ ಪಡೆದವರಿಗೆ ನಟ ನೆರವು ನೀಡಿದ್ದರು.

"ಸರ್ಕಾರ ಅಥವಾ ಇತರ ವ್ಯಕ್ತಿಗಳನ್ನು ದೂಷಿಸುವುದು ಸುಲಭ, ಆದರೆ ನನ್ನ ಕೆಲಸವನ್ನು ನಾನು ನಂಬುತ್ತೇನೆ." ಪರ ಊರುಗಳಲ್ಲಿ ಸಿಕ್ಕಿ ಬಿದ್ದವರಿಗೆ ಸಹಾಯ ಮಾಡಲು ಬಸ್ಸುಗಳನ್ನು ಕಳುಹಿಸುವುದರಿಂದ ಹಿಡಿದು ವಿದೇಶದಲ್ಲಿ ಸಿಕ್ಕಿದವರಿಗೆ ಚಾರ್ಟರ್ಡ್ ವಿಮಾನಗಳನ್ನು ಏರ್ಪಡಿಸುವವರೆಗೆ, ಸೋನು ಅವರ ಕೆಲಸವು ಜಗತ್ತಿನಾದ್ಯಂತದ ಸಾವಿರಾರು ಭಾರತೀಯರ ಜೀವನವನ್ನು ದಡ ಸೇರಿಸಿದೆ.

"ಇದೇನೂ ಸುಲಭವಾಗಿರಲಿಲ್ಲ!" ನಟ  ಹೇಳಿದ್ದು  ಪ್ರತಿ ಹಂತದಲ್ಲೂ ಪರವಾನಗಿಗಾಗಿ ಸಾಕಷ್ಟು ಹೆಣಗಬೇಕಾಗಿತ್ತು. ಬಹಳಷ್ಟು ಫೋನ್ ಕರೆಗಳು ಮತ್ತು ವೀಡಿಯೊ ಕರೆಗಳನ್ನು ಮೊದಲ  ಸಾಲಿನಲ್ಲೇ ತೀರ್ಮಾನಿಸುವುದು ಕಷ್ಟಕರವಾಗಿತ್ತು, ಆದರೆ ನಂತರ ಈ ಸಮಸ್ಯೆ ಬಗೆಹರಿದಿತ್ತು. ಅದರ ನಂತರ, ನಾನು ತಲುಪಿದ ರಾಜ್ಯಗಳಾದ್ಯಂತದ ಅಧಿಕಾರಿಗಳು ಅತ್ಯಂತ ಸ್ನೇಹಜೀವಿಗಳಾಗಿದ್ದರು, 

"ಭಾವನೆಗಳು ಜನರಿಗೆ ತಲುಪಿದವು, ಪರಿಣಾಮ ನನಗೆ ಬರುತ್ತಿದ್ದ ಸಹಾಯಕ್ಕಾಗಿನ ವಿನಂತಿಗಳು ಹೆಚ್ಚಾದವು.  ಸ್ವಯಂಸೇವಕರು ಸಹಾಯ ಮಾಡಲು ಮುಂಡಾಗಿ ಅವರ ಸಂಖ್ಯೆಯೂ ಸಹ ಏರಿಕೆಯಾಗಿತ್ತು.

"ಅವರು ವಿನಂತಿಗಳ ಮೂಲಕ ಊರಿಗೆ ತಲುಪಲು ಸಹಾಯ ಮಾಡುತ್ತಾರೆ ಮತ್ತು ಲಾಜಿಸ್ಟಿಕ್ಸ್ ಗೆ ಸಹ ನೆರವನ್ನು ನೀಡುತ್ತಾರೆ. ಇದಕ್ಕಾಗಿ ನನ್ನ ಕುಟುಂಬ ಸದಸ್ಯರನ್ನೂ ಸಹ ಸಹಾಯಕ್ಕಾಗಿ ಇರಿಸಿದ್ದೇನೆ."

ಅಗತ್ಯವಿರುವ ಜನರು ನೆರವನ್ನು  ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಔಷಧಿ ವಿತರಕರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸೇರಿದಂತೆ ಸಹಾಯ ಮಾಡಲು ನಟ ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಆದರೆ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅವರು ತಮ್ಮ ವೈಯಕ್ತಿಕ ಸುರಕ್ಷತೆಯ ಬಗ್ಗೆ ಚಿಂತಿಸುತ್ತಿರಲಿಲ್ಲವೆ? ಎಂದು ಕೇಳಲಾಗಿ  "ನನ್ನ ಕುಟುಂಬವು ಮೊದಲಿಗೆ ಹೆದರುತ್ತಿತ್ತು, ಆದರೆ ಮಾಡಬೇಕಾದದ್ದನ್ನು ಮಾಡಲು ನಾನು ಸದಾ ತೊಡಗಿಸಿಕೊಳ್ಳುವುದು ಅಗತ್ಯವಾಗಿತ್ತು. ಆದರೆ ನಾನು ನನ್ನ ಮಕ್ಕಳಿಂದ ದೈಹಿಕವಾಗಿ ದೂರವಿರುವುದನ್ನು ಖಚಿತಪಡಿಸಿಕೊಂಡಿದ್ದೇನೆ" ಎಂದು ಅವರು ಹೇಳಿದ್ದಾರೆ.

ಈ ಅನುಭವ  ಒಬ್ಬ ವ್ಯಕ್ತಿಯಾಗಿ ಅವನನ್ನು ತನ್ನನ್ನು ತಾನು ಮರುಚಿಂತನೆಗೆ ಒಳಪಡಿಸಿಕೊಳ್ಲಲು ಸಹಕಾರಿಯಾಗಿತ್ತು ಎಂದು ಅವರು ಹೇಳಿದ್ದಾರೆ.

"ಕಳೆದ 100 ದಿನಗಳಲ್ಲಿ ಓದಲು ನನಗೆ ನಾಲ್ಕು-ಐದು ಸ್ಕ್ರಿಪ್ಟ್‌ಗಳು ಸಿಕ್ಕಿವೆ, ಆದರೆ ನನಗೆ ಓದಲು ಸಾಧ್ಯವಾಗಿಲ್ಲ. ಯಾರಿಗಾದರೂ ನೆರವಿನ ಅಗತ್ಯವಿದೆ ಎಂದು ತಿಳಿದಾಗ ಅವರಿಗೆ ಸಹಕರಿಸುವುದು ಅಗತ್ಯವಾಗುತ್ತದೆ. ನಾನಿದನ್ನು ಇನ್ನೆಷ್ಟು ದಿನ ಮುಂದುವರಿಸಬಹುದು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನಾನಿದನ್ನು ಶಾಶ್ವತವಾಗಿ ನಡೆಸಿಕೊಂಡು ಹೋಗಬೇಕೆಂದು ನಾನು ಬಯಸುತ್ತೇನೆ." ನಟ ಹೇಳೀದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com