ಪತಿಯ ಆರೋಗ್ಯದ ವದಂತಿಗೆ ಕಿವಿಗೊಡದಿರಿ : ಅಭಿಮಾನಿಗಳಿಗೆ ಸಂಜಯ್ ದತ್ ಮಡದಿ ಮನವಿ

ಮೂರನೇ ಹಂತದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪತಿಯ ಆರೋಗ್ಯ ಸ್ಥಿತಿಯ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಬಾಲಿವುಡ್ ನಟ ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಬುಧವಾರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Published: 12th August 2020 08:01 PM  |   Last Updated: 12th August 2020 08:01 PM   |  A+A-


ಸಂಜಯ್ ದತ್ ದಂಪತಿ

Posted By : Raghavendra Adiga
Source : UNI

ಮೂರನೇ ಹಂತದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪತಿಯ ಆರೋಗ್ಯ ಸ್ಥಿತಿಯ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಬಾಲಿವುಡ್ ನಟ ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಬುಧವಾರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

“ಸಂಜಯ್ ದತ್ ಅವರ ಶೀಘ್ರ ಚೇತರಿಕೆಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಈ ಹಂತವನ್ನು ಜಯಿಸಲು ನಮಗೆ ಎಲ್ಲಾ ಶಕ್ತಿ ಮತ್ತು ಪ್ರಾರ್ಥನೆಗಳು ಬೇಕಾಗುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಕುಟುಂಬವು ಹಲವು ಸಂಕಷ್ಟಗಳನ್ನು ಹಾದುಹೋಗಿದ್ದು, ಇದೂ ಸಹ ಹಾದುಹೋಗುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

"ಆದಾಗ್ಯೂ, ಸಂಜಯ್ ಅವರ ಅಭಿಮಾನಿಗಳು ಊಹಾಪೋಹಗಳು ಮತ್ತು ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಆದರೆ ನಿರಂತರ ಪ್ರೀತಿ, ಬೆಂಬಲಪೂರ್ವಕ ಸಹಾಯ ಮಾಡಬೇಕೆಂದು ಹೃತ್ಪೂರ್ವಕ ವಿನಂತಿಯಾಗಿದೆ.

“ಸಂಜು ಯಾವಾಗಲೂ ಹೋರಾಟಗಾರ, ಮತ್ತು ನಮ್ಮ ಕುಟುಂಬವೂ ಸಹ ಹೋರಾಟವನ್ನೇ ನಡೆಸುತ್ತಾ ಬಂದಿದೆ, ಮುಂದಿನ ಸವಾಲುಗಳನ್ನು ಜಯಿಸಲು ನಾವು ಸಿದ್ದವಿದ್ದೇವೆ. ದೇವರು ನಮ್ಮನ್ನು ಪರೀಕ್ಷಿಸಲು ಮತ್ತೊಮ್ಮೆ ಬಯಸುತ್ತಿದ್ದಾನೆ, ನಿಮ್ಮ ಪ್ರಾರ್ಥನೆ ಮತ್ತು ಆಶೀರ್ವಾದ ಸದಾ ನಮ್ಮೊಂದಿಗಿರಲಿ: ಎಂದು ಹೇಳಿದ್ದಾರೆ. 

Stay up to date on all the latest ಬಾಲಿವುಡ್ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp