ಶಸ್ತ್ರಚಿಕಿತ್ಸೆಗಾಗಿ 39 ಮಕ್ಕಳನ್ನು ಫಿಲಿಪೈನ್ಸ್‌ನಿಂದ ನವದೆಹಲಿಗೆ ಕರೆತರಲಿದುವ ಸೋನು ಸೂದ್

ಪಿತ್ತಜನಕಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ  39 ಮಕ್ಕಳನ್ನು ದೂರದ ಫಿಲಿಪೈನ್ಸ್‌ನಿಂದ ನವದೆಹಲಿಗೆ ಕರೆತರುವ ವ್ಯವಸ್ಥೆ ಮಾಡುವುದಾಗಿ ನಟ ಸೋನು ಸೂದ್ ಗುರುವಾರ ಪ್ರಕಟಿಸಿದ್ದಾರೆ.
ಸೋನು ಸೂದ್
ಸೋನು ಸೂದ್

ಪಿತ್ತಜನಕಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ  39 ಮಕ್ಕಳನ್ನು ದೂರದ ಫಿಲಿಪೈನ್ಸ್‌ನಿಂದ ನವದೆಹಲಿಗೆ ಕರೆತರುವ ವ್ಯವಸ್ಥೆ ಮಾಡುವುದಾಗಿ ನಟ ಸೋನು ಸೂದ್ ಗುರುವಾರ ಪ್ರಕಟಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ವಲಸಿಗರು ತಮ್ಮ ಊರುಗಳನ್ನು ತಲುಪಲು ಸಹಾಯ ಮಾಡುವ ಕಾರ್ಯದಿಂದ ರಾಷ್ಟ್ರದ ಗಮನ ಸೆಳೆದಿರುವ ಈ ನಟ, ವೈದ್ಯಕೀಯ ಚಿಕಿತ್ಸೆಗಾಗಿ ಒಂದರಿಂದ ಐದು ವರ್ಷದೊಳಗಿನ 39 ಮಕ್ಕಳನ್ನು ರಾಷ್ಟ್ರ ರಾಜಧಾನಿಗೆ ಕರೆತರಲಿದ್ದಾರೆ.

ಪತ್ರಿಕಾ ಪ್ರಕಟಣೆಯ ಪ್ರಕಾರ, ಬಿಲಿಯರಿ ಅಟ್ರೆಸಿಯಾ ಎಂಬ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿರುವ ಹಲವಾರು ಫಿಲಿಫೈನ್ಸ್  ನ ಮಕ್ಕಳು ಸಾಂಕ್ರಾಮಿಕ ರೋಗದ ಕಾರಣ  ಶಸ್ತ್ರಚಿಕಿತ್ಸೆ ನಡೆಸಲು ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. "ಈ ಅಮೂಲ್ಯ ಜೀವಗಳನ್ನು ಉಳಿಸೋಣ. ಮುಂದಿನ ಎರಡು ದಿನಗಳಲ್ಲಿ ಅವರನ್ನು ಭಾರತಕ್ಕೆ ಕರೆದೊಯ್ಯುವ ವಯವಸ್ಥೆ ಮಾಡುತ್ತೇನೆ. "ನಟ ಸೂದ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಈ ಮೊದಲು, ನಟ ತನ್ನ ತಂಡದೊಂದಿಗೆ ಟೋಲ್-ಫ್ರೀ ಸಂಖ್ಯೆ ಮತ್ತು ವಾಟ್ಸಾಪ್ ಸಹಾಯವಾಣಿ ಸಂಖ್ಯೆ ಪ್ರಕಟಿಸಿ ತೊಂದರೆಗೆ ಸಿಲುಕಿದ್ದ  ಕಾರ್ಮಿಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರನ್ನು ಅವರವರ ಸ್ವಂತ ಊರಿಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಮಾಡಿದ್ದರು, 

ಅಲ್ಲದೆ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುವಲ್ಲಿ ಕಾರ್ಮಿಕರಿಗೆ ಬೆಂಬಲ ನೀಡಲು ಸೂದ್ ಇತ್ತೀಚೆಗೆ ಆ್ಯಪ್ ಒಂದನ್ನೂ ಸಹ ಪ್ರಾರಂಭಿಸಿದ್ದರು, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com