ಬಾಲಿವುಡ್ ನಲ್ಲಿ ನೆಪೊಟಿಸಂ ವಿವಾದ: 'ಸಡಕ್ 2' ಟ್ರೈಲರ್ ಮೇಲೆ ಪರಿಣಾಮ, ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಡಿಸ್ಲೈಕ್!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನಲ್ಲಿ ನೆಪೊಟಿಸಂ ಜೋರಾಗಿ ಕೇಳಿಬರುತ್ತಿದೆ. ಇದರ ಪರಿಣಾಮ ಇತ್ತೀಚೆಗೆ ಬಿಡುಗಡೆಯಾದ ಕೆಲವು ಚಿತ್ರಗಳ ಟೀಸರ್, ಟ್ರೈಲರ್ ಮೇಲೆ ಪರಿಣಾಮ ಬೀರುತ್ತಿದೆ.
ಸಡಕ್ 2
ಸಡಕ್ 2

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನಲ್ಲಿ ನೆಪೊಟಿಸಂ ಜೋರಾಗಿ ಕೇಳಿಬರುತ್ತಿದೆ. ಇದರ ಪರಿಣಾಮ ಇತ್ತೀಚೆಗೆ ಬಿಡುಗಡೆಯಾದ ಕೆಲವು ಚಿತ್ರಗಳ ಟೀಸರ್, ಟ್ರೈಲರ್ ಮೇಲೆ ಪರಿಣಾಮ ಬೀರುತ್ತಿದೆ.

ಜಾಹ್ನವಿ ಕಪೂರ್ ಅಭಿನಯದ ಗುಂಜನ್ ಸಕ್ಸೆನಾ ಸಿನೆಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಅದಕ್ಕೆ ನೆಪೊಟಿಸಂ ವಿವಾದ ತೀವ್ರ ಪೆಟ್ಟು ನೀಡಿತ್ತು. ಅದರ ಸಾಲಿಗೆ ಇದೀಗ ಆಲಿಯಾ ಭಟ್ , ಸಂಜಯ್ ದತ್, ಆದಿತ್ಯ ರಾಯ್ ಕಪೂರ್ ಅಭಿನಯದ ಸಡಕ್ -2 ಕೂಡ ಸೇರಿಕೊಂಡಿದೆ.

ನಿನ್ನೆ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು, ಅದು ಯೂಟ್ಯೂಬ್ ನಲ್ಲಿ ಅತಿ ಹೆಚ್ಚು  ಇಷ್ಟಪಡದ ವಿಡಿಯೊಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. 54 ಲಕ್ಷ ಮಂದಿ ಅದನ್ನು ಡಿಸ್ ಲೈಕ್ ಮಾಡಿದ್ದಾರೆ. ಯೂಟ್ಯೂಬ್ ನಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಲೈಕ್ ಮತ್ತು ಡಿಸ್ ಲೈಕ್ ಮಾಡಿರುವ ವಿಡಿಯೊಗಳ ಪೈಕಿ ಸಡಕ್ -2 ಟ್ರೈಲರ್ ಕೂಡ ಒಂದಾಗಿದೆ.

ಇದಕ್ಕೆ ಕಾರಣ ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಅದರ ನಂತರದ ವಿವಾದ, ಬೆಳವಣಿಗೆಗಳು. ಬಾಲಿವುಡ್ ನಲ್ಲಿ ಸ್ಟಾರ್ ಗಳ ಮಕ್ಕಳಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ, ಹೊರಗಿನಿಂದ ಬಂದ ಯಾವುದೇ ಹಿನ್ನೆಲೆ ಇಲ್ಲದವರಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಸ್ಟಾರ್ ಮಕ್ಕಳ ಚಿತ್ರ ವೀಕ್ಷಣೆಯನ್ನು ಬಹಿಷ್ಕರಿಸುವ ಒಂದು ಗುಂಪೇ ಹುಟ್ಟಿಕೊಂಡಿದೆ. 

ಮಹೇಶ್ ಭಟ್ ಅವರ 1991ನೇ ಸಾಲಿನ ಸಡಕ್ ಚಿತ್ರದ ಮುಂದುವರಿದ ಸರಣಿ ಸಡಕ್ -2 ಆಗಿದೆ. ಚಿತ್ರ ಇದೇ ತಿಂಗಳ 28ಕ್ಕೆ ಡಿಸ್ನಿ+ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com