'ದೃಶ್ಯಂ 'ಖ್ಯಾತಿಯ ಬಾಲಿವುಡ್ ನಿರ್ದೇಶಕ ನಿಶಿಕಾಂತ್ ಕಾಮತ್ ವಿಧಿವಶ

"ದೃಶ್ಯಂ", "ಮದಾರಿ" ಯಂತಹಾ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ನಿಶಿಕಾಂತ್ ಕಾಮತ್ ನಿಧನರಾಗಿದ್ದಾರೆ. ಹೈದರಾಬಾದ್‌ನ ಆಸ್ಪತ್ರೆ ಮೂಲಗಳ ಪ್ರಕಾರ ಕಾಮತ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು  "ನಿರ್ದೇಶಕ  ನಿಶಿಕಾಂತ್ ಕಾಮತ್ ಅವರು ಇಂದು 16:24 ಗಂಟೆಗೆ ನಿಧನರಾದರು. ಅವರು ಕಳೆದ ಎರಡು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು" ಎಂದು ಹೈದರಾಬಾದ್ ಎಐಜಿ
ನಿರ್ದೇಶಕ ನಿಶಿಕಾಂತ್ ಕಾಮತ್
ನಿರ್ದೇಶಕ ನಿಶಿಕಾಂತ್ ಕಾಮತ್

ಹೈದರಾಬಾದ್: "ದೃಶ್ಯಂ", "ಮದಾರಿ" ಯಂತಹಾ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ನಿಶಿಕಾಂತ್ ಕಾಮತ್ ನಿಧನರಾಗಿದ್ದಾರೆ. ಹೈದರಾಬಾದ್‌ನ ಆಸ್ಪತ್ರೆ ಮೂಲಗಳ ಪ್ರಕಾರ ಕಾಮತ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು  "ನಿರ್ದೇಶಕ  ನಿಶಿಕಾಂತ್ ಕಾಮತ್ ಅವರು ಇಂದು 16:24 ಗಂಟೆಗೆ ನಿಧನರಾದರು. ಅವರು ಕಳೆದ ಎರಡು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು" ಎಂದು ಹೈದರಾಬಾದ್ ಎಐಜಿ ಆಸ್ಪತ್ರೆ ಹೇಳಿದೆ.

ಯಕೃತ್ತಿನ ಸಮಸ್ಯೆಯಿಂದ ಹಲವು ದಿನಗಳಿಂದ ಬಳಲುತ್ತಿದ್ದ ನಿಶಿಕಾಂತ್ ಅವರು, ಅನಾರೋಗ್ಯ ಹೆಚ್ಚಾದ ಕಾರಣ ಜು.31ರಂದು ಹೈದರಾಬಾದ್'ನ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದರು. 

ನಿರ್ದೇಶಕ ಕಾಮತ್ ಮೃತಪಟ್ಟಿದ್ದಾರೆ ಎಂದು ಅವರ ಆಪ್ತ ಮರಾಠಿ ನಟ ಜಯವಂತ್ ವಾಡ್ಕರ್ ಹೇಳಿದ್ದಾರೆ. "ಮುಂಬೈ ಮೇರಿ ಜಾನ್" (2008) ನಲ್ಲಿ ಅವರೊಂದಿಗೆ ಕೆಲಸ ಮಾಡಿದ ನಟ ಆರ್ ಮಾಧವನ್ ಸೇರಿದಂತೆ ಅವರ ಅನೇಕ ಸಹಚರರು ಕಾಮತ್ ನಿಧನಕ್ಕೆ ಸಂತಾಪದ ಸಂದೇಶ ತಿಳಿಸಿದ್ದಾರೆ.

ಮರಾಠಿ ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿಶಿಕಾಂತ್ ಅವರು, ಬಾಲಿವುಡ್‌ ಸಿನಿಮಾಗಳಿಂದ ಹೆಚ್ಚು ಖ್ಯಾತಿ ಪಡಿದಿದ್ದಾರೆ. 2005ರಲ್ಲಿ ಮರಾಠಿಯ ‘ದೊಂಬಿವಾಲಿ ಫಾಸ್ಟ್‌’ ಸಿನಿಮಾದ ಮೂಲಕ ನಿರ್ದೇಶನದ ಹಾದಿ ಹಿಡಿದಿದ್ದರು. ಈ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು. 

2004ರ ‘ಹವಾ ಆನೆ ದೇ’ ಇವರ ನಟನೆಯ ಚೊಚ್ಚಲ ಸಿನಿಮಾವಾಗಿದೆ. 2008ರ ‘ಮುಂಬೈ ಮೇರಿ ಜಾನ್’ ಸಿನಿಮಾದ ಮೂಲಕ ನಟ–ನಿರ್ದೇಶಕನಾಗಿ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. ’ದೊಂಬಿವಾಲಿ ಫಾಸ್ಟ್‌’, ‘ಮುಂಬೈ ಮೇರಿ ಜಾನ್‌’, ‘ರಾಕಿ ಹ್ಯಾಂಡ್‌ಸಮ್‌’, ‘ಫೋರ್ಸ್‌’, ‘ಮದಾರಿ’, ‘ದೃಶ್ಯಂ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಡ್ಯಾಡಿ’, ‘ರಾಕಿ ಹ್ಯಾಂಡ್‌ಸಮ್‌’, ‘ಜ್ಯೂಲಿ 2‘ ಹಾಗೂ ‘ಭಾವೇಶ್ ಜೋಶಿ’ ಸಿನಿಮಾಗಳಲ್ಲಿ ತಮ್ಮ ನಟನಾ ಚಾತುರ್ಯವನ್ನು ತೋರಿದ್ದರು ನಿಶಿಕಾಂತ್. ಸಿನಿಮಾಗಳಿಗೆ ಮಾತ್ರ ತಮ್ಮನ್ನು ಸೀಮಿತವಾಗಿರಿಸಿಕೊಳ್ಳದ ಇವರು ವೆಬ್‌ ಸರಣಿಗಳನ್ನು ನಿರ್ಮಾಣ ಮಾಡಿದ್ದರು. ’ದಿ ಫೈನಲ್ ಕಾಲ್’ ಹಾಗೂ ’ರಂಗ್‌ಬಾಝ್ ಫಿರ್‌ಸೇ’ ಇವರು ನಿರ್ಮಾಣ ಮಾಡಿದ ವೆಬ್‌ಸರಣಿಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com