ಕೋವಿಡ್ ನಡುವೆ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ 'ಕೆಬಿಸಿ' ಶೂಟಿಂಗ್ ಪುನಾರಂಭ

ಕೊರೋನಾವೈರಸ್ ಸೋಂಕಿನ ನಡುವೆ ಅತ್ಯಂತ ಮುನ್ನೆಚ್ಚರಿಕೆಯೊಂದಿಗೆ ಜನಪ್ರಿಯ ರಿಯಾಲಿಟಿ ಶೋ  "ಕೌನ್ ಬನೇಗಾ ಕರೋಡ್ ಪತಿ" (ಕೆಬಿಸಿ) ಯ ಹನ್ನೆರಡನೇ  ಸೀಸನ್ ಚಿತ್ರೀಕರಣವನ್ನು ಪ್ರಾರಂಭಿಸಿದ್ದೇನೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಭಾನುವಾರ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೋವಿಡ್ -19 ರಿಂದ ಚೇತರಿಸಿಕೊಂಡ ಬಚ್ಚನ್, ಮಾರ್ಚ್‌ನಲ್ಲಿ ಕೊರೋನಾ ಪ್ರೇರಿತ ಲಾಕ್
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಕೊರೋನಾವೈರಸ್ ಸೋಂಕಿನ ನಡುವೆ ಅತ್ಯಂತ ಮುನ್ನೆಚ್ಚರಿಕೆಯೊಂದಿಗೆ ಜನಪ್ರಿಯ ರಿಯಾಲಿಟಿ ಶೋ  "ಕೌನ್ ಬನೇಗಾ ಕರೋಡ್ ಪತಿ" (ಕೆಬಿಸಿ) ಯ ಹನ್ನೆರಡನೇ  ಸೀಸನ್ ಚಿತ್ರೀಕರಣವನ್ನು ಪ್ರಾರಂಭಿಸಿದ್ದೇನೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಭಾನುವಾರ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೋವಿಡ್ -19 ರಿಂದ ಚೇತರಿಸಿಕೊಂಡ ಬಚ್ಚನ್, ಮಾರ್ಚ್‌ನಲ್ಲಿ ಕೊರೋನಾ ಪ್ರೇರಿತ ಲಾಕ್‌ಡೌನ್ ನಂತರ ಮೊದಲ ಬಾರಿಗೆ ಶೂಟಿಂಗ್ ಸೆಟ್ ಗೆ ಬಂದಿದ್ದಾರೆ.

77 ವರ್ಷದ ನಟ ತಮ್ಮ ಬ್ಲಾಗಿನಲ್ಲಿ ಕೆಬಿಸಿ ಚಿತ್ರೀಕರಣದ ಅನುಭವ ಹಂಚಿಕೊಂಡಿದ್ದಾರೆ. ಎಲ್ಲರೂ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳನ್ನು ಧರಿಸಿದ್ದಾರೆಕೆಬಿಸಿ ಪ್ರಾರಂಭವಾಗಿದೆ.  ಕೆಬಿಸಿ 12. ಪ್ರಾರಂಭವಾದ ವರ್ಷ 2000, ಇಂದು 2020 ವರ್ಷ. ವರ್ಷಗಳು ಕಳೆದವು... ಶೋ ಉಳಿದಿದೆ. "ಶಾಂತ, ಪ್ರಜ್ಞೆ, ಪ್ರತಿ ನಿಯೋಜಿತ ಕೆಲಸದ ದಿನಚರಿ, ಮುನ್ನೆಚ್ಚರಿಕೆಗಳು, ವ್ಯವಸ್ಥೆಗಳು, ಸಾಮಾಜಿಕ ಅಂತರ, ಮಾಸ್ಕ್ ಗಳು, ಸ್ವಚ್ಚವಾಗಿರುವ ಸೆಟ್ ಆದರೂ ಶೋ ಏನಾಗಬಹುದುಎಂಬ ಆತಂಕ.... ಬಚ್ಚನ್ ಹೇಳಿದ್ದಾರೆ.

ಅನುಭವಿ ನಟ ಸೆಟ್‌ನಲ್ಲಿ ಸೌಹಾರ್ದ ವಾತಾವರಣ ಕಡಿಮೆಯಾಗಿರುವುದು ಗಮನಿಸಿದ್ದಾರೆ. ಕೆಲಸಕ್ಕೆ ಸಂಬಂಧಿಸದ ಹೊರತು ಯಾರೂ ಪರಸ್ಪರ ಮಾತನಾಡಲಿಲ್ಲ. "ಇದು ಪ್ರಯೋಗಾಲಯದಂತಿದೆ, . ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ, ಅಂತಹ ದೃಶ್ಯಗಳನ್ನು ನೋಡುವ ಸಮಯ ಎಂದಿಗೂ  ಬರುವುದಿಲ್ಲ ಎಂದಿದ್ದೆ ಆದರೆ ಇಲ್ಲಿ ಹಾಗೆಯೇ ಇದೆ... ಗುರುತಿರುವ ಮುಖಗಳನ್ನೂ ಈಗ ಗುರುತಿಸಲಾಗುತ್ತಿಲ್ಲ.  ನಾವು ಸರಿಯಾದ ಸ್ಥಳ, ಸರಿಯಾದ ಜನರೊಡನೆ  ಇದ್ದೇವೆಯೇ ಎಂಬ ಅನುಮಾನ, ಭಯ ಎಲ್ಲದರೊಡನೆ ಮುಂದುವರಿದಿದ್ದೇವೆ...ಎಲ್ಲಾ ಮುನ್ನೆಚ್ಚರಿಕೆಗಳೊಡನೆ ಎಚ್ಚರಿಕೆಯಿಂದ ಕೆಲಸ ಮಾಡುತ್ತವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com